ಸಾಂದರ್ಭಿಕ ಚಿತ್ರ 
ರಾಜ್ಯ

ಮಹಿಳೆಗೆ ಲೈಂಗಿಕ ಕಿರುಕುಳ: ಯೆಮನ್ ಪ್ರಜೆ ಸೇರಿ ಇಬ್ಬರ ಬಂಧನ

ಹೊಸ ವರ್ಚಾಚರಣೆ ದಿನದಂದು ಎಂ.ಜಿ. ರಸ್ತೆಯಲ್ಲಿ ನಡೆದಿದ್ದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ ರಾಷ್ಟ್ರವ್ಯಾಪ್ತಿ ಚರ್ಚೆಗೆ ಗ್ರಾಸವಾಗಿರುವುದು ಹಸಿರಾಗಿರುವಾಗಲೇ ನಗರದಲ್ಲಿ ಮತ್ತೊಂದು ಲೈಂಗಿ ಕಿರುಕುಳ ಪ್ರಕರಣವೊಂದು ನಡೆದಿರುವುದು...

ಬೆಂಗಳೂರು: ಹೊಸ ವರ್ಚಾಚರಣೆ ದಿನದಂದು ಎಂ.ಜಿ. ರಸ್ತೆಯಲ್ಲಿ ನಡೆದಿದ್ದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ ರಾಷ್ಟ್ರವ್ಯಾಪ್ತಿ ಚರ್ಚೆಗೆ ಗ್ರಾಸವಾಗಿರುವುದು ಹಸಿರಾಗಿರುವಾಗಲೇ ನಗರದಲ್ಲಿ ಮತ್ತೊಂದು ಲೈಂಗಿ ಕಿರುಕುಳ ಪ್ರಕರಣವೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಜನವರಿ. 13 ರ ರಾತ್ರಿ ಈ ಘಟನೆ ನಡೆದಿದೆ. 24 ವರ್ಷದ ಮಹಿಳೆ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯಾಗಿದ್ದಾರೆ. ಸಂತ್ರಸ್ತ ಮಹಿಳೆ ಬಾಣಸವಾಡಿ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ಪೊಲೀಸಕರು ಯೆಮನ್ ರಾಷ್ಟ್ರದ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಿಕ್ಕಿ ಅಲಿಯಾಸ್ ತಿಮ್ಮಣ್ಣ ಉತ್ತಪ್ಪ (27) ಮತ್ತು ಯೆಮನ್ ರಾಷ್ಟ್ರದ ಪ್ರಜೆ ಅಯೂಬ್ ಅಲಿ (25) ಎಂದು ಗುರ್ತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 357 ಮತ್ತು 273ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

ಸಂತ್ರಸ್ತ ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜ.13 ರಂದು ರಿಕ್ಕಿ ಹಾಗೂ ಅಯೂಬ್ ಜೊತೆಗೆ ಬ್ರಿಗೇಡ್ ರಸ್ತೆಯಲ್ಲಿರುವ ಪಬ್ ವೊಂದಕ್ಕೆ ಹೋಗಿದ್ದರು. ಈ ವೇಳೆ ಮದ್ಯ ಸೇವಿಸಿರುವ ಆಕೆ ಕೆಲ ಹೊತ್ತಿನ ಬಳಿ ಪಬ್ ಸಿಬ್ಬಂದಿಗಳೊಂದಿಗೆ ಜಗಳಕ್ಕಿಳಿದಿದ್ದಾಳೆ. ಈ ವೇಳೆ ರಿಕ್ಕಿ ಹಾಗೂ ಆಯೂಬ್ ಆಕೆಯನ್ನು ಪಬ್ ನಿಂದ ಹೊರಗೆ ಕರೆದುತಂದಿದ್ದಾರೆ. ಈ ದೃಶ್ಯಾವಳಿಗಳು ಪಬ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಮಾಹಿತಿ ನೀಡಿದ್ದು, ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಮೂವರು ಕಾರೊಂದರಲ್ಲಿ ಹೋಗಿದ್ದೆವು. ಆಕೆಯ ಹೊಸ ವಿಳಾಸ ನಮಗೆ ಗೊತ್ತಿರಲಿಲ್ಲ. ಹೀಗಾಗಿ ಆಕೆ ಸಾಮಾನ್ಯವಾಗಿ ಯಾವಾಗಲೂ ಕಮ್ಮನಹಳ್ಳಿಯಲ್ಲಿ ತನ್ನ ಗೆಳತಿಯೊಂದಿಗಿರುತ್ತಿದ್ದಳು. ಅಲ್ಲಿಯೇ ಆಕೆಯನ್ನು ಬಿಟ್ಟು ಹೋಗಿದ್ದೆವೆಂದು ಹೇಳಿಕೊಂಡಿದ್ದಾರೆ.

ಇನ್ನು ಮಹಿಳೆ ಹೇಳುವ ಪ್ರಕಾರ ಪಬ್ ನಲ್ಲಿ ಪ್ರಜ್ಞೆ ತಪ್ಪಿದ ಬಳಿ ನಾನು ಗೆಳೆತಿಯ ಮನೆಯಲ್ಲಿದ್ದೆ. ಜನವರಿ 14 ರ ಮಧ್ಯಾಹ್ನ 2 ಗಂಟೆಗೆ ಎದ್ದು ನೋಡಿದಾಗ ದೇಹದ ಮೇಲೆ ಗಾಯಗಳಾಗಿದ್ದವು. ಈ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿತ್ತು. ನಂತರ ಪೊಲೀಸರಿಗೆ ದೂರು ನೀಡಲಾಯಿತು ಎಂದು ಹೇಳಿಕೊಂಡಿದ್ದಾರೆ.

ತನ್ನ ದೇಹದ ಖಾಸಗಿ ಭಾಗಗಳ ಮೇಲೆ ಗಾಯವಾಗಿರುವ ಬಗ್ಗೆ ಆಕೆಗೆ ಅರಿವಿಲ್ಲ. ಕೆಲ ಸುಟ್ಟ ಗಾಯಗಳೂ ಕೂಡ ಇವೆ. ಈ ಬಗ್ಗೆ ಯುವಕರೂ ಕೂಡ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಪ್ರಸ್ತುತ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುವಕರು ಮಹಿಳೆಯನ್ನು ಬಾರ್ ಗೆ ಕರೆದುಕೊಂಡ ಹೋದ ಬಳಿಕ ಆಕೆಯನ್ನು ಮತ್ತೆ ಕಮ್ಮನಹಳ್ಳಿಗೆ ಬಿಟ್ಟಿದ್ದಾರೆಂದು ಹೇಳುತ್ತಿದ್ದಾರೆ. ಪ್ರಸ್ತುತ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಹೇಮಂತ್ ನಿಂಬ್ಲಕರ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!