ವಿ.ಸೋಮಣ್ಣ-ಯಡಿಯೂರಪ್ಪ (ಸಂಗ್ರಹ ಚಿತ್ರ) 
ರಾಜ್ಯ

ಯಡಿಯೂರಪ್ಪನವರದ್ದು ಹಿತ್ತಾಳೆ ಕಿವಿ, ಸುತ್ತಲಿರುವ ಜನರನ್ನು ದೂರವಿಟ್ಟು ಯೋಚಿಸಬೇಕು: ವಿ.ಸೋಮಣ್ಣ

ಯಡಿಯೂರಪ್ಪನವರದ್ದು ಹಿತ್ತಾಳೆ ಕಿವಿ, ಅವರು ನಮ್ಮ ನಾಯಕರು, ಆದರೆ ತಮ್ಮ ಸುತ್ತಲಿನ 4 ಜನರನ್ನು ದೂರವಿಟ್ಟು ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರು: ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಅಸಮಾಧಾನ ಬಹಿರಂಗಪಡಿಸಿದ್ದು, ಯಡಿಯೂರಪ್ಪನವರದ್ದು ಹಿತ್ತಾಳೆ ಕಿವಿ, ಅವರು ನಮ್ಮ ನಾಯಕರು, ಆದರೆ ತಮ್ಮ ಸುತ್ತಲಿನ 4 ಜನರನ್ನು ದೂರವಿಟ್ಟು ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ. 
ಕಾಂಗ್ರೆಸ್ ಸೇರುವ ವದಂತಿಗಳ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ವಿ.ಸೋಮಣ್ಣ, ಕಾಂಗ್ರೆಸ್ ಸೇರುವುದು ವದಂತಿಯಷ್ಟೇ. ಎಲ್ಲವನ್ನೂ ನೀಡಿರುವ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ, ವದಂತಿಗಳ ಬಗ್ಗೆ ಹೆಚ್ಚು ಮಾತನಾಡಾಬೇಕಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ನಮಗೆ ಈಗಿನ ಯಡಿಯೂರಪ್ಪನವರು ಬೇಡ, ಹಳೆಯ ಯಡಿಯೂರಪ್ಪನವರು ಬೇಕು ಎಂದಿದ್ದು, ಯಡಿಯೂರಪ್ಪ ಸುತ್ತಲಿರುವ ಜನರನ್ನು ದೂರವಿಟ್ಟು ಸ್ವತಂತ್ರವಾಗಿ ಯೋಚಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 
ಪಕ್ಷದಲ್ಲಿ ಸಮಸ್ಯೆ ಇದ್ದಾಗ ಯಡಿಯೂರಪ್ಪನವರು ಬಗೆಹರಿಸಬೇಕು, ಹಾಗಾಗಿಯೇ ಅವರನ್ನು ಪ್ರಶ್ನಾತೀತ ನಾಯಕ ಎನ್ನುವುದು. ನಮಗೆ ಯಡಿಯೂರಪ್ಪನವರೇ ನಾಯಕರು, ಆದರೆ ಅವರು ಸುತ್ತಲಿರುವ ಜನರನ್ನು ದೂರವಿಟ್ಟು ಯೋಚಿಸಬೇಕಿದೆ ಎಂದಿದ್ದಾರೆ ಸೋಮಣ್ಣ. ಕಾಂಗ್ರೆಸ್ ಸೇರ್ಪಡೆ ವಿಷಯ ಸುಳ್ಳು ಎಂದು ನಾನು ಹೇಳುವುದಿಲ್ಲ ಎಂದು ಮಾಧ್ಯಮಗಳಿಗೆ ವಿ.ಸೋಮಣ್ಣ ಹೇಳಿಕೆ ನೀಡಿದ್ದರು. ಬಿಜೆಪಿ ಮುಖಂಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹಗಳುಂಟಾಗಿದ್ದ ಹಿನ್ನೆಲೆಯಲ್ಲಿ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ