ರಾಜ್ಯ

ಮಹದಾಯಿ ವಿವಾದ: ಮತ್ತೊಂದು ತೀವ್ರ ಹೋರಾಟಕ್ಕೆ ರೈತರ ನಿರ್ಧಾರ

Manjula VN

ಹುಬ್ಬಳ್ಳಿ: ಮಹಾದಾಯಿ ಯೋಜನೆ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಮತ್ತೊಂದು ತೀವ್ರ ಹೋರಾಟವನ್ನು ನಡೆಸಲು ರೈತ ಸಂಘಟನೆಗಳು ನಿರ್ಧಾರ ಕೈಗೊಂಡಿವೆ.

ಮಹಾದಾಯಿ ಯೋಜನೆ ಜಾರಿಗೆ ತರುವಲ್ಲಿ ಸರ್ಕಾರ ತಡ ಮಾಡುತ್ತಿದೆ ಎಂದು ಹೇಳಿರುವ ರೈತರು ಇಂದಿನಿಂದ ತಮ್ಮ ಹೋರಾಟವನ್ನು ಆರಂಭಿಸಲು ರೈತರು ನಿರ್ಧರಿಸಿದ್ದಾರೆ.

ಧಾರವಾಡದ ನವಲಗುಂದ ಮತ್ತು ನರಗುಂದ, ಗದಗ ಜಿಲ್ಲೆ ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ಮಹಾದಾಯಿ ಯೋಜನೆಯನ್ನು ಶೀಘ್ರಗತಿಯಲ್ಲಿ ಜಾರಿಗೆ ತರುವಂತೆ ಆಗ್ರಹಿಸಿ ಪ್ರತಿಭಠನೆ ನಡೆಸಲಿದ್ದಾರೆ.

ಇಂದಿನಿಂದ ಆರಂಭವಾಗುವ ಈ ಪ್ರತಿಭಟನೆಗಳಿಗೆ ನವಲಗುಂದದ ವಾಣಿಜ್ಯ ಸಮುದಾಯಗಳು ಬೆಂಬಲ ವ್ಯಕ್ತಪಡಿಸಿದ್ದು, ರೈತ ಸಂಘಟನೆಗಳು ನವಲಗುಂದದಲ್ಲಿರುವ ರೈತ ಭವನದ ಎದುರು ಪ್ರತಿಭಟನೆ ನಡೆಸಲಿದೆ ಎಂದು ತಿಳಿದುಬಂದಿದೆ. ರೈತ ಸಂಘಟನೆಗಳೊಂದಿಗೆ ಕೆಲ ಸಾರ್ವಜನಿಕ ಸಂಘಟನೆಗಳೂ ಕೈಜೋಡಿಸಲಿವೆ.

ರೈತರ ಈ ಪ್ರತಿಭಟನೆಗೆ ಜೆಡಿಎಸ್ ಪಕ್ಷ ಕೂಡ ಬೆಂಬಲವನ್ನು ವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ನವಲಗುಂದದ ಶಾಸಕ ಎನ್.ಹೆಚ್. ಕೊನಾರಡ್ಡಿಯವರು ಕೂಡ ಭಾಗಿಯಾಗಲಿದ್ದಾರೆ.

SCROLL FOR NEXT