ಬೆಂಗಳೂರು: ದಾಖಲೆ ಇಲ್ಲದ ನಾಲ್ಕು ಕೋಟಿ ರು. ಹಣವನ್ನು ಸಾಗಿಸುತ್ತಿದ್ದ ಕೇರಳ ಮೂಲದ ಮೂವರನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ ಬಂಧಿಸಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಆರೋಪಿಗಳು 4,27 ಕೋಟಿ ರುಪಾಯಿಯನ್ನು ರವಾನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್, ಶಂಶುದ್ದೀನ್ ಮತ್ತು ಅಫ್ಜಲ್ ಎಂದು ಗುರಿತಿಸಲಾಗಿದೆ. ಇದರಲ್ಲಿ 3 ಕೋಟಿಯಷ್ಟು 2000 ರುಪಾಯಿ ಮುಖಬೆಲೆಯ ನೋಟುಗಳು, ಉಳಿದ ಹಣ 500 ಮತ್ತು 100 ರುಪಾಯಿ ಮುಖಬೆಲೆಯದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಬಂಧಿತರು ಕಮಿಷನ್ ಗಾಗಿ ಹಣ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರು 1 ಲಕ್ಷ ರುಪಾಯಿ ಹಣ ಸಾಗಟ ಮಾಡುವುದಕ್ಕೆ 100 ರುಪಾಯಿ ಕಮಿಷನ್ ಪಡೆಯುತ್ತಿದ್ದರು. ಇನ್ನು ಇಷ್ಟು ಮೊತ್ತದ ಹಣ ಯಾರದು ಎಂದು ಇನ್ನಷ್ಟೇ ತಿಳಿಯಬೇಕಿದೆ.