ಕೋಲಾರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಕೆಜಿಎಫ್ ಉಳಿಸಿ ಕಾರ್ಯಕರ್ತರು 
ರಾಜ್ಯ

ಬೆಂಗಳೂರಿನ ತ್ಯಾಜ್ಯ ಕೆಜಿಎಫ್ ಗೆ ಸಾಗಾಟ: ತಜ್ಞರು, ನಿವಾಸಿಗಳಿಂದ ವಿರೋಧ

ನಗರದ ತ್ಯಾಜ್ಯಗಳನ್ನು ಕೋಲಾರ ಚಿನ್ನದ ಗಣಿ ಮತ್ತು ತುಮಕೂರಿನ ಮಧುಗಿರಿ ಸಮೀಪದ ಹಳ್ಳಿಗಳಿಗೆ...

ಬೆಂಗಳೂರು: ನಗರದ ತ್ಯಾಜ್ಯಗಳನ್ನು ಕೋಲಾರ ಚಿನ್ನದ ಗಣಿ ಮತ್ತು ತುಮಕೂರಿನ ಮಧುಗಿರಿ ಸಮೀಪದ ಹಳ್ಳಿಗಳಿಗೆ ಸಾಗಾಟ ಮಾಡುವ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ(ಕೆಸಿಡಿಸಿ) ನಡೆ  ಘನ ತ್ಯಾಜ್ಯ ತಜ್ಞರನ್ನು ಕಕ್ಕಾಬಿಕ್ಕಿಗೊಳಿಸಿದೆ. ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 
ತ್ಯಾಜ್ಯ ವಿಲೇವಾರಿ ವಿಷಯ ಬಂದಾಗ ಸಾಗಾಟ ವೆಚ್ಚ, ದುರ್ವಾಸನೆಯ ನಿಯಂತ್ರಣಕ್ಕೆ, ಕಸ ಸಂಗ್ರಹ ಮತ್ತು ಒಂದು ಸಂಗ್ರಹ ನಿರ್ಮಾಣ ಮೊದಲಾದ ವಿಷಯಗಳು ಉದ್ಭವಿಸುತ್ತವೆ.
ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 4,000 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತವೆ. ಕೂಡ್ಲು ಮತ್ತು ಮಾಗಡಿ ರಸ್ತೆಯಲ್ಲಿ ಎರಡು ಕಾಂಪೋಸ್ಟ್ ಘಟಕಗಳಿವೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮೂರು ಘಟಕಗಳು ಮುಚ್ಚಲ್ಪಟ್ಟಿವೆ. ಮತ್ತೆ ಎರಡು ಘಟಕಗಳು ಸ್ಥಳೀಯ ನಿವಾಸಿಗಳ ಪ್ರತಿಭಟನೆಯಿಂದಾಗಿ ಹಾಗೂ ಮತ್ತೊಂದು ಘಟಕದಲ್ಲಿ ಸುಮಾರು 100 ಟನ್ ತ್ಯಾಜ್ಯ ಹಾಕಲಾಗುತ್ತದೆ.
''ಬಿಬಿಎಂಪಿ ಪ್ರತಿದಿನ 500 ಟನ್ ಗಳಷ್ಟು ಕಸಗಳನ್ನು ಪ್ರತಿನಿತ್ಯ ಕಳುಹಿಸುತ್ತದೆ. ತ್ಯಾಜ್ಯ ಪಾರ್ಕ್ ಗಳು ನಿರ್ಮಾಣವಾದರೆ ಪ್ರತಿದಿನ 1000 ಟನ್ ತ್ಯಾಜ್ಯಗಳನ್ನು ಸಾಗಾಟ ಮಾಡಬಹುದು. ಬೆಂಗಳೂರು ನಗರದಲ್ಲಿ ಇಂದು ಪ್ರತಿಕಡೆಗಳಲ್ಲಿ ಮನೆಗಳಿರುವುದರಿಂದ ತ್ಯಾಜ್ಯಗಳನ್ನು ರಾಶಿ ಹಾಕಲು ಸಾಧ್ಯವಾಗುವುದಿಲ್ಲ. ಆದರೆ ಮಾರಿಕುಪ್ಪಂನ ಸುತ್ತಮುತ್ತ 3ರಿಂದ 4 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮನೆಗಳಿಲ್ಲ ಎನ್ನುತ್ತಾರೆ ಕೆಸಿಡಿಸಿಯ ಅಧ್ಯಕ್ಷ ಮಾರಿಕುಪ್ಪಂ.
ಇದೀಗ ಕೋಲಾರದ ಸಮೀಪ ತ್ಯಾಜ್ಯ ನಿರ್ವಹಣೆ ಮಾಡಲು ಉದ್ದೇಶಿಸಿರುವ ಸ್ಥಳ ಕೆಜಿಎಫ್ ನಿಂದ 5 ಕಿಲೋ ಮೀಟರ್ ದೂರದಲ್ಲಿದೆ. 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಪಾರ್ಕ್ ನಲ್ಲಿ ವಿದ್ಯುತ್, ಬಯೋಗ್ಯಾಸ್ ಮತ್ತು ಕಾಂಪೋಸ್ಟ್ ಗಳನ್ನು ತಯಾರಿಸಲಾಗುತ್ತದೆ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ದುರ್ವಾಸನೆಯನ್ನು ತಡೆದು ಪರಿಸರ ಸ್ನೇಹಿ ತ್ಯಾಜ್ಯ ಘಟಕವನ್ನು ಸ್ಥಾಪಿಸಬೇಕಾಗಿದೆ. ಹಸಿರು ವಲಯಗಳನ್ನು ಕೂಡ ಉಳಿಸಬೇಕಾಗಿದೆ. ರಾಜ್ಯ ಸರ್ಕಾರ ಇದನ್ನು ಬಜೆಟ್ ನಲ್ಲಿ ಘೋಷಿಸಬೇಕು. ನಾವು ತಜ್ಞರ ಅಭಿಪ್ರಾಯಗಳನ್ನು ಪಡೆದು ಪರಿಸರ ಪರಿಣಾಮದ ಸಾಧ್ಯತೆಗಳನ್ನು ಅಧ್ಯಯನ ಮಾಡಬೇಕು.ಇದು ಆರಂಭಿಕ ಹಂತವಷ್ಟೆ ಎನ್ನುತ್ತಾರೆ ಅವರು.
ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ತಜ್ಞರ ಸಮಿತಿ ಸದಸ್ಯ ಎನ್.ಎಸ್.ರಾಮಕಾಂತ್, ತಜ್ಞರ ಸಮಿತಿಯನ್ನು ಈ ವಿಷಯದಲ್ಲಿ ಸಲಹೆ ಕೇಳಿಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಬೆಂಗಳೂರಿನಿಂದ ಕೋಲಾರದವರೆಗೆ ತ್ಯಾಜ್ಯ ವಿಲೇವಾರಿ ಸಾಧ್ಯವಿಲ್ಲ ಎನ್ನುತ್ತಾರೆ.
ಕೆಜಿಎಫ್ ನಲ್ಲಿ ಬಂದ್, ಹೋರಾಟ: ಕೋಲಾರದಲ್ಲಿ ತ್ಯಾಜ್ಯ ಪಾರ್ಕ್ ಸ್ಥಾಪನೆಗೆ ಅಲ್ಲಿನ ಕಾರ್ಯಕರ್ತರು ಮತ್ತು ನಿವಾಸಿಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ನಿನ್ನೆ ಕೆಜಿಎಫ್ ಉಳಿಸಿ ಕಾರ್ಯಕರ್ತರು ಕೋಲಾರದಲ್ಲಿ ಬಂದ್ ನಡೆಸಿದರು. ಅಂಗಡಿ-ಮುಂಗಟ್ಟುಗಳು ಮುಚ್ಚಲಾಗಿತ್ತಾದರೂ ಕೆಲವು ಬಸ್ ಗಳ ಓಡಾಟ ಎಂದಿನಂತೆ ಇದ್ದಿತು.
ಕೋಲಾರ್ ಗೋಲ್ಡ್ ಫೀಲ್ಡ್ ನ್ನು ಕೋಲಾರ ಗಾರ್ಬೇಜ್ ಫೀಲ್ಡ್ ಆಗಿ ಮಾಡಲು ಬಿಡುವುದಿಲ್ಲ. ಬೇರೆ ಊರಿನ ಕಸವನ್ನು ತಂದು ಇಲ್ಲಿ ರಾಶಿ ಹಾಕಲು ಬಿಡುವುದಿಲ್ಲ ಎಂದು ಊರ ಮುಖಂಡರು ಹೇಳುತ್ತಾರೆ.
ಕೆಜಿಎಫ್ ವಕೀಲರ ಸಂಘ ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದೆ. ಅಲ್ಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಬರಬಾರದೆಂದು ಕೋಲಾರ ನಿವಾಸಿಗಳು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್