ಸಾಂದರ್ಭಿಕ ಚಿತ್ರ 
ರಾಜ್ಯ

ಮಕ್ಕಳ ರಕ್ಷಣೆ ಕಾಯ್ದೆಗೆ ತಿದ್ದುಪಡಿ: ರಕ್ಷಕರಿಗೆ ನಿರಾಳತೆ

ಮಕ್ಕಳಿಗಾಗಿ ದುಡಿಯುವ ಸರ್ಕಾರೇತರ ಸಂಘಟನೆ ಬಾಸ್ಕೊಗೆ ಒಂದು ದಿನ ದೂರವಾಣಿ...

ಬೆಂಗಳೂರು: ಮಕ್ಕಳಿಗಾಗಿ ದುಡಿಯುವ ಸರ್ಕಾರೇತರ ಸಂಘಟನೆ ಬಾಸ್ಕೊಗೆ ಒಂದು ದಿನ ದೂರವಾಣಿ ಕರೆ ಬಂತು. ಜಯನಗರದ ಬಸ್ ನಿಲ್ದಾಣವೊಂದರಲ್ಲಿ ಬಾಲಕಿಯೊಬ್ಬಳನ್ನು ಒತ್ತಾಯಪೂರ್ವಕವಾಗಿ ಕಾರಿನ ಒಳಕ್ಕೆ ದೂಡಿದ್ದನ್ನು ನೋಡಿರುವುದಾಗಿ ಉದ್ವೇಗದಿಂದ ಹೇಳಿಕೊಂಡರು. 
ಅದೃಷ್ಟವೆಂಬಂತೆ ಕಾರಿನೊಳಕ್ಕೆ ಬಾಲಕಿಯನ್ನು ದೂಡಿದ ಸಂದರ್ಭದಲ್ಲಿ ಕಾರಿನ ಸಂಖ್ಯೆಯನ್ನು ದೂರವಾಣಿ ಕರೆ ಮಾಡಿ ತಿಳಿಸಿದವರು ಗುರುತಿಸಿಕೊಂಡಿದ್ದಾರೆ.ಅಲ್ಲದೆ ಪೊಲೀಸರಿಗೆ ಮಾಹಿತಿ ನೀಡುವ ಮೊದಲೇ ಕಾರಿನಲ್ಲಿ ಕರೆದುಕೊಂಡು ಹೋದ ವ್ಯಕ್ತಿಯ ಮನೆ ವಿಳಾಸ ಪತ್ತೆ ಹಚ್ಚಿದ್ದಾರೆ.
ಸಂಘಟನೆ ಸದಸ್ಯರು ಮತ್ತು ದೂರು ನೀಡಿದ ವ್ಯಕ್ತಿ ಕಾರಿನಲ್ಲಿ ಕದ್ದೊಯ್ದ ವ್ಯಕ್ತಿಯ ಮನೆಗೆ ಬಂದು ಕೇಳಿದಾಗ ಮನೆಯ ಮಾಲೀಕ ಯಾರೂ ಇಲ್ಲವೆಂದು ನಟಿಸಿದನು. ಆದರೆ ಸಿಬ್ಬಂದಿಗೆ ಮನೆಯೊಳಗೆ ಯಾರೊ ಇದ್ದಾರೆ ಎಂದು ತಿಳಿಯಿತು. ಒಳಗೆ ಹೋಗಿ ನೋಡಿದರೆ ಮಂಡ್ಯದ 13 ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಾಳೆ. ಅವಳ ಮೈಯಲ್ಲೆಲ್ಲಾ ಏಟು ತಿಂದು ಗಾಯಗಳಾಗಿದ್ದವು. ಆಕೆಯ ತಂದೆಯೇ ಬಡತನದ ಕಾರಣದಿಂದಾಗಿ ಅಲ್ಲಿ ಮನೆಗೆಲಸಕ್ಕೆ ಹಚ್ಚಿದ್ದನು.
ಬಾಲ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2017ರಡಿ ಪೊಲೀಸರು ತಕ್ಷಣವೇ ಮನೆ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಬಹುದು. 1968ರ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಇತ್ತೀಚಿನ ತಿದ್ದುಪಡಿ ಕಾಯ್ದೆ ಪ್ರಕಾರ ಅರಿವಿನ ಅಪರಾಧ ಎಂದು ಪರಿಗಣಿಸಿ ಪೊಲೀಸರು ಕೇಸು ಹಾಕಬಹುದು.
ಪೊಲೀಸರ ಅಧಿಕಾರ ಕಾಯ್ದೆ ತಿದ್ದುಪಡಿಯಿಂದ ಹೆಚ್ಚಾಗಿದೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಲು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗುತ್ತದೆ. ಮಾಲೀಕರು ಪ್ರಭಾವಿ ವ್ಯಕ್ತಿಗಳಾದರೂ ಕೂಡ ಪೊಲೀಸರು ಸ್ಥಳದಲ್ಲಿಯೇ ಇದ್ದು ನಿಯಮ ಸ್ಪಷ್ಟವಾಗಿರುವುದರಿಂದ ಮಾಲೀಕರ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಬಹುದು. ಇದು ಮುಂಚೆಯಾದರೆ ಸಾಧ್ಯವಾಗುತ್ತಿರಲಿಲ್ಲ ಎಂದು ಬಾಸ್ಕೊ ಸಂಸ್ಥೆಯ ಜೆನ್ನಿಫರ್ ಎಂಬುವವರು ಹೇಳುತ್ತಾರೆ.
ಅನೇಕರು ಈ ತಿದ್ದುಪಡಿಯಿಂದ ಖುಷಿಯಾಗಿದ್ದರೆ, 14ರಿಂದ 18 ವರ್ಷದವರೆಗಿನ ಹದಿಹರೆಯದವರನ್ನು ನಿರ್ಬಂಧಿತ ಕೆಲಸಗಳಿಗೆ ನೇಮಿಸುವುದನ್ನು ತಡೆಗಟ್ಟಲು ಕೂಡ ಅನುಕೂಲವಾಗುತ್ತದೆ.
ರಕ್ಷಿಸಲ್ಪಟ್ಟ ಮಕ್ಕಳಿಗೆ ಕಾರ್ಮಿಕ ಇಲಾಖೆ ಸಹಾಯ ಮಾಡುತ್ತದೆ. ಕೊಯ್ದೆಗೆ ತಿದ್ದುಪಡಿಯಿಂದಾಗಿ ಮಕ್ಕಳನ್ನು ರಕ್ಷಿಸಿದವರಿಗೆ ಸಹ ಭಾರೀ ನಿರಾಳತೆ ಸಿಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT