ಬೆಂಗಳೂರು: ಪೌರ ಕಾರ್ಮಿಕರಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಿಂಗಾಪೂರ ಪ್ರವಾಸಕ್ಕೆ ತೆರಳಲು ಮಹಿಳಾ ಪೌರ ಕಾರ್ಮಿಕರು ಹಿಂದೇಟು ಹಾಕಿದ್ದಾರೆ, ಹೊರಗಿನ ಪ್ರಪಂಚದ ಜೊತೆ ಹೊಂದಾಣಕೆ ಸಮಸ್ಯೆಯಿಂದಾಗಿ ಮಹಿಳಾ ಪೌರ ಕಾರ್ಮಿಕರು ಪ್ರವಾಸದಿಂದ ಹೊರಗುಳಿದಿದ್ದಾರೆ.
ನಗರದಲ್ಲಿ ಸುಮಾರು ಶೇ.75 ರಷ್ಟು ಮಹಿಳೆಯರು ಪೌರ ಕಾರ್ಮಿಕರಿದ್ದಾರೆ. ಅದರಲ್ಲಿ ಕೇವಲ ಶೇ, 10 ರಷ್ಟು ಪೌರ ಕಾರ್ಮಿಕರು ಪ್ರವಾಸಕ್ಕೆ ತೆರಳಲು ಆಸಕ್ತಿ ತೋರಿಲ್ಲ, ಘನತ್ಯಾಜ್ಯ ನಿರ್ವಹಣೆ ಸಂಬಂಧ ವೈಜ್ಞಾನಿಕವಾಗಿ ಮಾಹಿತಿ ನೀಡಲು ಸಿಂಗಾಪೂರ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ಮೊದಲ ತಂಡದಲ್ಲಿ 40 ಕಾರ್ಮಿಕರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಅದರಲ್ಲಿ ಕೇವಲ 3 ಮಂದಿ ಮಾತ್ರ ಮಹಿಳಾ ಪೌರ ಕಾರ್ಮಿಕರು ತೆರಳುತ್ತಿದ್ದಾರೆ. ಜುಲೈ 4 ರಂದು ತೆರಳುವ ಮೊದಲ ತಂಡ 5 ದಿನಗಳ ಪ್ರವಾಸ ಕೈಗೊಳ್ಳಲಿದೆ. ಶ್ರೀರಂಗಪಟ್ಟಣ ಟೌನ್ ಮುನಿಸಿಪಲ್ ಕೌನ್ಸಿಲ್, ಎಂಜಿನೀಯರ್, ಅಶ್ವಿನಿ ಬಿ,ಜೆ , ಅಳಾನವರ್ ಪಟ್ಟಣ ಪಂಚಾಯ್ತಿ ಕಾರ್ಮಿಕರಾದ ಸಾವಿತ್ರಿ ಗುಟ್ಟಿ, ಮಂಗಳೂರು ಸಿಟಿ ಕಾರ್ಪೋರೇಷನ್ ನಿಂದ ವಿಜಯಲಕ್ಷಿ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಸರಿಸುಮಾರು 1 ಸಾವಿರ ಪೌರ ಕಾರ್ಮಿಕರಿಗೆ ಸಿಂಗಪೂರ್‌ನ ಸ್ವಚ್ಛತೆ ಪಾಠ ಹೇಳಿಕೊಡಲು ಮುಂದಾಗಿರುವ ರಾಜ್ಯ ಸರ್ಕಾರ ಪೌರಾಡಳಿತ ಸಚಿವಾಲಯದ ಮೂಲಕ ಪೌರ ಕಾರ್ಮಿಕರಿಗೆ ಸಿಂಗಪೂರ್ ಸ್ವಚ್ಛತೆಯ ನೇರ ದರ್ಶನ ಮಾಡಿಸಲಿದೆ. ಈಶ್ವರ್ ಖಂಡ್ರೆ ಈ ಪ್ರವಾಸದ ನೇತೃತ್ವ ವಹಿಸಿದ್ದಾರೆ.
ಪೌರಾಡಳಿತ ಇಲಾಖೆ ಪ್ರತಿ ಪೌರ ಕಾರ್ಮಿಕರ ಮೇಲೆ 75 ಸಾವಿರ ರೂ. ವೆಚ್ಚ ಮಾಡುತ್ತಿದೆ. ಜತೆಗೆ ಅವರ ಖರ್ಚಿಗೂ 5 ಸಾವಿರ ರೂ. ಹೆಚ್ಚುವರಿಯಾಗಿ ಒದಗಿಸಲಿದೆ.
ನೌಕರಿ ಖಾಯಂ ಆಗಿರುವ ಪೌರ ಕಾರ್ಮಿಕರು ಪ್ರವಾಸಕ್ಕೆ ಹೋಗಲಿದ್ದಾರೆ. 30 ರಿಂದ 55 ವರ್ಷದೊಳಗಿನ ನೌಕರರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಕೇವಲ ಒಬ್ಬ ಮಹಿಳಾ ಪೌರ ಕಾರ್ಮಿಕರು ಪ್ರವಾಸಕ್ಕೆ ತೆರಳಲು ಆಸಕ್ತಿ ತೋರಿಲ್ಲ ,ಹಲವು ಕಾರ್ಮಿಕರ ಬಳಿ ಪಾಸ್ ಪೋರ್ಟ್ ಇಲ್ಲ, ಜೊತೆಗೆ ಪ್ರವಾಸಕ್ಕೆ ತೆರಳಲು ಮುಜುಗರ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.