ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ 
ರಾಜ್ಯ

100 ಸ್ಟಾರ್ಟ್ಅಪ್ ಉದ್ಯಮಗಳಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು

ಕರ್ನಾಟಕದಲ್ಲಿ ಸ್ಟಾರ್ಟ್ ಅಪ್ ಉದ್ಯಮಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಎಲೆವೇಟ್-2017 ಎಂಬ...

ಬೆಂಗಳೂರು: ಕರ್ನಾಟಕದಲ್ಲಿ ಸ್ಟಾರ್ಟ್ ಅಪ್ ಉದ್ಯಮಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಎಲೆವೇಟ್-2017 ಎಂಬ ಅಭಿಯಾನವನ್ನು ಕೈಗೊಳ್ಳಲಿದೆ. ಇದರಡಿ 100 ಹೊಸ ಸೃಜನಾತ್ಮಕ ಸ್ಟಾರ್ಟ್ ಅಪ್ ಗಳಿಗೆ ಸಹಾಯವಾಗಲಿದೆ. ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಈ ಸ್ಟಾರ್ಟ್ ಅಪ್ ಗೆ ಮೀಸಲಾದ ವೆಬ್ ಸೈಟ್ ನ್ನು ನಿನ್ನೆ ಉದ್ಘಾಟಿಸಿದರು. ಇಲ್ಲಿ ಸ್ಟಾರ್ಟ್ ಅಪ್ ಉದ್ಯಮಿಗಳು ತಮಗೆ ಬೇಕಾದ ಆಲೋಚನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ವೆಬ್ ಸೈಟ್ ನ ಹೆಸರು www.elevate.bengaluruite.biz ರಾಜ್ಯ ಸರ್ಕಾರ ಸ್ಟಾರ್ಟ್ ಅಪ್ ಯೋಜನೆಗಳನ್ನು ಹೊಂದಿದ್ದು ಮುಂದಿನ 5 ವರ್ಷಗಳಲ್ಲಿ 20,000 ಸ್ಟಾರ್ಟ್ಅಪ್ ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಅದು ಕೃಷಿಯಿಂದ ಹಿಡಿದು ವಿಮಾನಯಾನದವರೆಗೆ ಯಾವುದೇ ವಲಯಗಳಿಂದಾಗಿರಲಿ. ಇದರ ಭಾಗವಾಗಿ ಸರ್ಕಾರ ಎಲೆವೇಟ್-2017ನ್ನು ಆರಂಭಿಸಿದ್ದು, 100 ಅತ್ಯುತ್ತಮ ಸ್ಟಾರ್ಟ್ಅಪ್ ಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಹಣಕಾಸು ಸೇವೆ ಒದಗಿಸುವುದಾಗಿದೆ ಎಂದು ಹೇಳಿದರು.
ಮಾರ್ಗದರ್ಶಕರನ್ನು ಪಡೆಯುವುದು, ಸಂಪರ್ಕಜಾಲದ ಅವಕಾಶಗಳನ್ನು ಅಭಿವೃದ್ಧಿಪಡಿಸುವುದು, ಕಲ್ಪನೆಯ ಊರ್ಜಿತಗೊಳಿಸುವಿಕೆ ಇತ್ಯಾದಿಗಳನ್ನು ಒದಗಿಸುತ್ತದೆ. ಎಲ್ಲಾ ಸ್ಟಾರ್ಟ್ ಅಪ್ ಗಳಿಗೆ ಹಣದ ಸಹಾಯ ಬೇಕಾಗುವುದಿಲ್ಲ, ನಾವು ತಾಂತ್ರಿಕ ಮತ್ತು ವ್ಯಾಪಾರ ನೆರವನ್ನು ಕೂಡ ನೀಡುತ್ತೇವೆ ಎಂದು ಹೇಳಿದರು. ಐಟಿ ಬಿಟಿ ಇಲಾಖೆ ಮುಕ್ತ ಸಭೆಗಳನ್ನು ಆಸಕ್ತ ಜನರೊಂದಿಗೆ ಮೈಸೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ ಹಾಗೂ ಬೆಂಗಳೂರುಗಳಲ್ಲಿ ನಡೆಸಲಿದೆ. ಮುಂಚೆ ಪ್ರಾಮುಖ್ಯತೆಯನ್ನು ಹೆಚ್ಚಾಗಿ ಬೆಂಗಳೂರಿಗೆ ನೀಡಲಾಗುತ್ತಿತ್ತು,ಇದೇ ಮೊದಲ ಬಾರಿಗೆ ಸ್ಟಾರ್ಟ್ ಅಪ್ ಗಳ ಕುಂದುಕೊರತೆ, ಆಸಕ್ತಿಗಳ ಬಗ್ಗೆ ವಿಚಾರಿಸಲು ಸಣ್ಣ ನಗರಗಳಿಗೆ ಹೋಗುತ್ತಿದ್ದೇವೆ ಎಂದರು.
ಎರಡನೇ ಶ್ರೇಣಿ ನಗರಗಳಲ್ಲಿನ ಜನರನ್ನು ಉತ್ತೇಜಿಸಲು ಮತ್ತು ಸೆಳೆಯಲು ಈ ಪ್ರಯತ್ನವಾಗಿದೆ. ಆಗಸ್ಟ್ 5ರಿಂದ ಅಧಿಕಾರಿಗಳು ಈ ಸ್ಥಳಗಳಿಗೆ ಹೋಗಲಿದ್ದಾರೆ. ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ ಗೆ ಸಂಬಂಧಪಟ್ಟ ರೋಡ್ ಶೋ ಇರಲಿದೆ ಎಂದರು.
ನಿನ್ನೆಯಿಂದ ಇದೇ 18ರವರೆಗೆ ಜನರು ಸ್ಟಾರ್ಟ್ ಅಪ್ ನ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಬಹುದು. ಜನರ ಆಲೋಚನೆಗಳು ಸೃಜನಾತ್ಮಕವಾಗಿದ್ದು ಕರ್ನಾಟಕಕ್ಕೆ ಆಧಾರಿತವಾಗಿರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT