ಯುವಕ ನೀರಿನಲ್ಲಿ ಮುಳುಗುತ್ತಿರುವ ಸಂಗ್ರಹ ಚಿತ್ರ 
ರಾಜ್ಯ

ವಿಹಾರಕ್ಕೆಂದು ಬಂದಿದ್ದ ಮೂವರು ಯುವಕರು ಶಾಂಭವಿ ನದಿಯಲ್ಲಿ ಮುಳುಗಿ ನೀರುಪಾಲು

ಈಜಲು ತೆರಳಿದ್ದ ಮೂವರು ಯುವಕರು ಮೂಲ್ಕಿಯ ಮಟ್ಟುವಿನ ಶಾಂಭವಿ ನದಿಯಲ್ಲಿ ಮುಳುಗಿ ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ...

ಮಂಗಳೂರು: ಈಜಲು ತೆರಳಿದ್ದ ಮೂವರು ಯುವಕರು ಮೂಲ್ಕಿಯ ಮಟ್ಟುವಿನ ಶಾಂಭವಿ ನದಿಯಲ್ಲಿ ಮುಳುಗಿ ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ. 
ಮಂಗಳೂರಿನ 11 ಮಂದಿ ಸ್ನೇಹಿತರು ವಿಹಾರಕ್ಕೆಂದು ಮೂಲ್ಕಿಗೆ ಬಂದಿದ್ದರು. ಈ ವೇಳೆ ಎಲ್ಲರೂ ನದಿಗೆ ಇಳಿದಿದ್ದ ನೀರಿನ ಸೆಳೆತಕ್ಕೆ ಸಿಲುಕಿ ಅಕ್ಷತ್, ಕಿಶೋರ್ ಮತ್ತು ಮಹೇಶ್ ಎನ್ನುವ ಯುವಕರು ನೀರು ಪಾಲಾಗಿದ್ದಾರೆ. 
ಮೃತರಲ್ಲಿ ಮಹೇಶ್ ಗೆ ಈಜು ಬರುತ್ತಿದ್ದು ಆದರೆ ಮತ್ತಿಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ. ದುರ್ಘಟನೆ ಬಳಿಕ ಸ್ಥಳೀಯರು ಮತ್ತು ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿ ಮೃತರ ದೇಹಗಳನ್ನು ಹೊರತೆಗೆದಿರುವುದಾಗಿ ವರದಿಯಾಗಿದೆ. ಈ ಸಂಬಂಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಬಿ-ಜಿ ರಾಮ್ ಜಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

'ಜವಾಬ್ದಾರಿಯಿಂದ ಪ್ರಧಾನಿ ಮೋದಿ ನುಣುಚಿಕೊಂಡರು': ಸಂಸತ್ ಹೊರಗೆ ನರವಾಣೆ ಆತ್ಮಚರಿತ್ರೆ ಪ್ರದರ್ಶಿಸಿದ Rahul Gandhi

News Wrap 04-02-2026 | ಅಬಕಾರಿ ಇಲಾಖೆ ಹಗರಣ: ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು; Namma Metro ಪ್ರಯಾಣ ದರ ಶೇ.5 ರಷ್ಟು ಏರಿಕೆಗೆ ನಿರ್ಧಾರ!

ಎಂಜಿನ್‌ನಲ್ಲಿ ಬೆಂಕಿ: ಟರ್ಕಿಶ್ ಏರ್‌ಲೈನ್ಸ್ ವಿಮಾನ ಕೋಲ್ಕತ್ತಾದಲ್ಲಿ ತುರ್ತು ಭೂಸ್ಪರ್ಶ; ತಪ್ಪಿದ ದೊಡ್ಡ ಅನಾಹುತ

ದುಬಾರಿ ಕಾಲೇಜು ಶುಲ್ಕ ಪ್ರಶ್ನಿಸಿ ಪ್ರತಿಭಟನೆ: ವಿದ್ಯಾರ್ಥಿ ನಾಯಕರ ಅಪಹರಣ, ನಟ Mohan Babu ವಿರುದ್ಧ ಪ್ರಕರಣ ದಾಖಲು! ಪೊಲೀಸ್ ಸಿನಿಮೀಯ ಚೇಸ್! Video

SCROLL FOR NEXT