ಹಾನಿಗೊಳಗಾಗಿರುವ ಶಿವಲಿಂಗ 
ರಾಜ್ಯ

ಚಿತ್ರದುರ್ಗ: ನಿಧಿ ಕಳ್ಳರಿಗೆ ಐತಿಹಾಸಿಕ ಶಿವಲಿಂಗಗಳೇ ಟಾರ್ಗೆಟ್

ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ನಿಧಿಗಳ್ಳರಿಂದ ತೊಂದರೆಗೆ ಸಿಲುಕುತ್ತಿವೆ. ಇತ್ತೀಚೆಗೆ ಧವಳಪ್ಪನಗುಡ್ಡದಲ್ಲಿರುವ ಶಿವಲಿಂಗಗಳನ್ನು ನಿಧಿಗಳ್ಳರು ಟಾರ್ಗೆಟ್ ...

ಚಿತ್ರದುರ್ಗ: ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ನಿಧಿಗಳ್ಳರಿಂದ ತೊಂದರೆಗೆ ಸಿಲುಕುತ್ತಿವೆ. ಇತ್ತೀಚೆಗೆ ಧವಳಪ್ಪನಗುಡ್ಡದಲ್ಲಿರುವ ಶಿವಲಿಂಗಗಳನ್ನು ನಿಧಿಗಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ.
ಬೆಟ್ಟದ ಮೇಲಿರುವ 21 ಶಿವಲಿಂಗಗಳಲ್ಲಿ ಹೆಚ್ಚಿನ ಸಂಖ್ಯೆಯ ಲಿಂಗಗಳನ್ನು ಕಬ್ಬಿಣದ ರಾಡಿನಿಂದ ಹೊಡೆದು ಮುರಿಯಲಾಗಿದೆ. ಲಿಂಗಗಳಿಗೆ ಹಾನಿಯಾಗಿರುವುದು ಪತ್ರಕರ್ತರು ಮತ್ತು ನಡಿಗೆದಾರರ ಗಮನಕ್ಕೆ ಬಂದಿದೆ. ಇಡಿ ಧವಳಪ್ಪನಗುಡ್ಡ ನಿಧಿಗಳ್ಳರಿಗೆ ಸ್ವರ್ಗವಾಗಿದೆ, ಚಂದ್ರವಳ್ಳಿ ಪ್ರದೇಶಕ್ಕೆ ಕಾವಲು ಹಾಕಲಾಗಿದೆ, ಹೀಗಿರುವಾಗ ನಿಧಿಗಳ್ಳರು ಹೇಗೆ ಇಲ್ಲಿಗೆ ಪ್ರವೇಶಿಸುತ್ತಾರೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಚಂದ್ರವಳ್ಳಿ ವಲಯದಲ್ಲಿರುವ ಸ್ಮಾರಕಗಳು ಹಾಗೂ ವರ್ಣ ಚಿತ್ರಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಆದರೂ ಅವನ್ನು ನಮ್ಮ ವ್ಯಾಪ್ತಿಗೆ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಭಾರತದ ಪುರಾತತ್ವ ಸಮೀಕ್ಷೆ ಇಲಾಖೆ ಎಎಸ್ ಐ ಗಿರೀಶ್ ಹೇಳಿದ್ದಾರೆ.
ಒಂದು ವೇಳೆ ಪುರಾತತ್ವ  ಮತ್ತು ಸಂಗ್ರಹಾಲಯ ಇಲಾಖೆ ಈ ಸ್ಮಾರಕಗಳನ್ನು ನಮ್ಮ ವ್ಯಾಪ್ತಿಗೆ ನೀಡಿದರೇ, ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ. 
ವಿಗ್ರಹಗಳಿಗೆ ಹಾನಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅವರುಗಳ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ,
ಧವಳಪ್ಪನಗುಡ್ಡವನ್ನು ಕದಂಬ ವಂಶದ ಮಯೂರ ವರ್ಮ ಸ್ಥಾಪಿಸಿದ್ದು, ಅಲ್ಲಿ ಸ್ಥಾಪಿಸಿರುವ ಶಿವಲಿಂಗಗಳಿಗೆ ಪ್ರತಿನಿತ್ಯ ಮಯೂರ ವರ್ಮನಿಂದ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು ಎಂದು ಇತಿಹಾಸಕಾರ ಬಿ. ರಾಜಶೇಖರಪ್ಪ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!