ಶರತ್ ಮಡಿವಾಳ ಶವಯಾತ್ರೆ ಚಿತ್ರ
ಮಂಗಳೂರು: ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್)ದ ಕಾರ್ಯಕರ್ತ ಶರತ್ ಮಡಿವಾಳ ಶವಯಾತ್ರೆ ವೇಳೆ ಗಲಭೆ ಸೃಷ್ಠಿಸಿದ ಆರೋಪದ ಮೇಲೆ ಐವರು ಹಿಂದು ಸಂಘಟನೆಯ ನಾಯಕರ ವಿರುದ್ಧ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಹಿಂದು ಜಾಗರಣ ವೇದಿಕೆ(ಎಚ್‌ಜೆವಿ)ಯ ನಾಯಕರಾದ ಸತ್ಯಜೀತ್ ಸೂರತ್ಕಲ್ ಮತ್ತು ಹರೇಶ್ ಪೂಂಜಾಫ್ ಮತ್ತು ಬಜರಂಗ ದಳದ ನಾಯಕರಾದ ಶರಣ್ ಪುಂಪ್ ವೆಲ್ ಮತ್ತು ಪ್ರದೀಪ್ ಪುಂಪ್ ವೆಲ್ ಸೇರಿದಂತೆ ಐವರ ಮೇಲೆ ಐಪಿಸಿ ಸೆಕ್ಷನ್ 307(ಕೊಲೆ ಯತ್ನ)ರ ಅಡಿಯಲ್ಲಿ ಭಟ್ವಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಎಚ್‌ಜೆವಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಪೊಲೀಸರು ಶರತ್ ಮಡಿವಾಳರ ಶವಯಾತ್ರೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸತ್ಯಜೀತ್ ಸೂರತ್ಕಲ್ ಸೇರಿದಂತೆ ಐವರ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಸತ್ಯಜೀತ್ ಅವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಕಲ್ಲು ತೂರಾಟ ನಡೆಸುತ್ತಿದ್ದವರನ್ನು ತಡೆಯಲು ಯತ್ನಿಸಿದ್ದರು. ಹಿಂದು ಸಂಘಟನೆ ಕಾರ್ಯಕರ್ತರಿಗೆ ಪ್ರತೀಕಾರ ತೀರಿಸಿಕೊಳ್ಳಬೇಕಿತ್ತು. ಇದಕ್ಕೆ ಸತ್ಯಜೀತ್ ಅವರು ಕಾರ್ಯಕರ್ತರಿಗೆ ಕಾನೂನು ಕೈಗೆ ತೆಗೆದುಕೊಳ್ಳದಂತೆ ಮನವೊಲಿಸಿದ್ದರು ಎಂದು ಹೇಳಿದ್ದಾರೆ.
ಭಾನುವಾರ ರಾತ್ರಿ ಸುಮಾರು 50 ಪೊಲೀಸರು ನಮ್ಮ ಮನೆಯ ಹತ್ತಿರ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸಿದರು. ಯಾವುದೇ ಮಹಿಳಾ ಪೊಲೀಸ್ ಇಲ್ಲದೆ ಪೊಲೀಸರು ಬಂದಿದ್ದರು. ಮನೆಯಲ್ಲಿ ಗಂಡ ಸತ್ಯಜಿತ್ ಸೂರತ್ಕಲ್ ಅವರು ಇಲ್ಲವೆಂದು ಎಷ್ಟು ಹೇಳಿದರು ಕೇಳದೆ ಮನೆಯ ಬಾಗಿಲನ್ನು ತೆರೆಸಿದರು. ಈ ವೇಳೆ ಮನೆಯಲ್ಲಿ ಯಾವುದೇ ಗಂಡು ದಿಕ್ಕು ಇರಲಿಲ್ಲ. ನಾನು ನನ್ನ ಇಬ್ಬರು ಮಕ್ಕಳು ಮತ್ತು ಮಹಿಳಾ ಸಂಬಂಧಿಕರು ಮಾತ್ರ ಇದ್ದೇವು ಎಂದು ಸತ್ಯಜೀತ್ ಪತ್ನಿ ಸವಿತಾ ಸತ್ಯಜೀತ್ ಹೇಳಿದ್ದಾರೆ.