ಕಾರವಾರ: ಕಾರವಾರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ನ ನಿರ್ದೇಶಕ ಸೇರಿದಂತೆ ಆರು ಮಂದಿ ಕನ್ನಡಿಗರು ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಮರನಾಥ ಯಾತ್ರೆಯ ಯಾತ್ರಾರ್ಥಿಗಳ ಮೇಲೆ ಸುಮಾವಾರ ರಾತ್ರಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಏಳು ಮಂದಿಯನ್ನ ಹತ್ಯೆ ಮಾಡಿದ್ದರು. ಭಯೋತ್ಪಾದಕ ದಾಳಿ ಶಂಕೆ ಹಿನ್ನೆಲೆ ಸಿಆರ್ಪಿಎಫ್ ಯೋಧರು ಯಾತ್ರಾರ್ಥಿಗಳನ್ನು ಅನಂತನಾಗ್ ಜಿಲ್ಲೆಯಲ್ಲಿ ತಡೆದು ನಿಲ್ಲಿಸಿದ್ದರು.
ಇದರಲ್ಲಿ ಕಾರವಾದ ಎಸ್ಬಿಐ ನಿರ್ದೇಶಕ ರತ್ನಾಕರ್ ಹೆಬ್ಬಾರ್, ಪತ್ನಿ, ಮಗ, ಸಿರಸಿಯ ನಾಗೇಶ್ ಮತ್ತು ಆಶಾ ಹಂದೆ, ಕುಮುಟಾದ ಕೃಷ್ಣ ಗುನಗಿ ಸೇರಿದಂತೆ ರಾಜ್ಯದ ಹಲವರು ಸಂಕಷ್ಟಕ್ಕೆ ಸಿಲುಕಿದ್ದರು. ನಂತರ ಯಾತ್ರೆ ಕೈಗೊಂಡ ಹೆಬ್ಬಾರ್ ತಂಡ ಸೋಮವಾರ ಬೆಳಗ್ಗೆ ಅಮರನಾಥನ ದರ್ಶನ ಪಡೆದಿದ್ದರು.
ಕೆಲಸ ಸಂಬಂಧ ಹೆಬ್ಬಾರ್ ಅವರು ಎಸ್ಬಿಐ ಶಾಖೆಯ ನಿರ್ದೇಶಕಿ ಮಂಜುಳ ಅವರಿಗೆ ಸೋಮವಾರ ಬೆಳಗ್ಗೆ 7.45ರ ಸುಮಾರಿಗೆ ಕರೆ ಮಾಡಿ ಮಾತನಾಡಿದ್ದರು. ಕೆಲ ನಿಮಿಷಗಳ ನಂತರ ಸಂಪರ್ಕ ಕಡಿತಗೊಂಡಿದ್ದು ನಂತರ ಎಷ್ಟೇ ಪ್ರಯತ್ನ ಪಟ್ಟರು ಅವರ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಅಂದೇ ಸಂಜೆ ಭಯೋತ್ಪಾದಕ ದಾಳಿ ನಡೆದಿದ್ದು ಹೆಬ್ಬಾರ್ ಸಂಬಂಧಿಕರು ಆತಂಕಗೊಂಡಿದ್ದು ಜಿಲ್ಲಾಡಳಿತವನ್ನು ಸಂಪರ್ಕಿಸುತ್ತಿದ್ದಾರೆ ಎಂದು ಮಂಜುಳ ಅವರು ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಜುಲೈ 5ರಂದು ರತ್ನಾಕರ್ ಹೆಬ್ಬಾರ್ ಅವರು ಅಮರನಾಥ ಯಾತ್ರೆ ಕೈಗೊಂಡಿದ್ದು ಜುಲೈ 19ಕ್ಕೆ ಹಿಂತಿರುಗುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics