ಹಾರಂಗಿ ಜಲಾಶಯ 
ರಾಜ್ಯ

ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿತ: ಕೊಡಗಿಗೆ ನೀರಿನ ಕೊರತೆ

ಜುಲೈ 2 ನೇ ವಾರದಲ್ಲಿ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಳೆದ 3 ದಶಕಗಳಲ್ಲೇ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದು, ಕೊಡಗು ಜಿಲ್ಲೆಗೆ ನೀರಿನ ಕೊರತೆ ಎದುರಾಗಲಿದೆ.

ಮಡಿಕೇರಿ: ಜುಲೈ 2 ನೇ ವಾರದಲ್ಲಿ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಳೆದ 3 ದಶಕಗಳಲ್ಲೇ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದು, ಕೊಡಗು ಜಿಲ್ಲೆಗೆ ನೀರಿನ ಕೊರತೆ ಎದುರಾಗಲಿದೆ. ಭರ್ತಿ 8.5 ಟಿಎಂಸಿ ಅಡಿ ನೀರು ಸಂಗ್ರಹಣೆಯ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ನೀರಿನ ಮಟ್ಟ 2,836.75 ಅಡಿಯಷ್ಟಿದ್ದು, 3.9 ಟಿಎಂಸಿ ಯಷ್ಟು ಮಾತ್ರ ನೀರು ಸಂಗ್ರಹವಾಗಿದೆ. 
2,8859 ಅಡಿ ಜಲಾಶಯದ ಗರಿಷ್ಠ ನೀರಿನ ಮಟ್ಟವಾಗಿದ್ದು, ಕಳೆದ ವರ್ಷ 1,288 ಕ್ಯುಸೆಕ್ಸ್ ನಷ್ಟು ಒಳಹರಿವಿದ್ದರೆ ನೀರಿನ ಹೊರ ಹರಿವಿನ ಪ್ರಮಾಣ 4,585 ಕ್ಯುಸೆಕ್ಸ್ ನಷ್ಟಿತ್ತು. ಕಳೆದ ವರ್ಷ ಇದೇ ದಿನಗಳಲ್ಲಿ ಜಲಾಶಯದಲ್ಲಿನ ನೀರಿನ ಸಂಗ್ರಹ 5.99 ಟಿಎಂಸಿ ಅಡಿ ಇದ್ದರೆ 2015 ರಲ್ಲಿ ದಾಖಲೆಯ 6.67 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಆದರೆ ಈ ಬಾರಿ ನೀರಿನ ಸಂಗ್ರಹ ಮಟ್ಟ ದಾಖಲೆಯ ಪ್ರಮಾಣದಲ್ಲಿ ಕುಸಿದಿರುವುದರಿಂದ ಹಾರಂಗಿ ಜಲಾಶಯದಿಂದ ಕೃಷಿಗೆ ನೀರು ಪಡೆಯುವ ಪ್ರದೇಶದಲ್ಲಿರುವ ರೈತರಿಗೆ ಆತಂಕ ಎದುರಾಗಿದೆ. 
ಹಾರಂಗಿ ಜಲಾಶಯ ಅರಕಲಗೂಡು, ಹಾಸನ, ಪಿರಿಯಾಪಟ್ಟಣ, ಸೋಮಾರಪೇಟೆ, ಹುಣಸೂರು, ಕೆಆರ್ ನಗರ ತಾಲೂಕುಗಳಲ್ಲಿ ಸುಮಾರು 1.35 ಲಕ್ಷ ಎಕರೆ ಕೃಷಿಭೂಮಿಗೆ ನೀರಿನ ಆಧಾರವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT