ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ನಟರಾಜನ್ ಮತ್ತು ಇಳವರಸಿ ಜೈಲಿನ ಸಮವಸ್ತ್ರ ಧರಿಸದೆ ಸ್ವಚ್ಛಂದವಾಗಿ ಓಡಾಡುತ್ತಿರುವ ವಿಡಿಯೋ ಬಹಿರಂಗಗೊಂಡಿದೆ.
ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಮತ್ತೊಂದು ವಿಡಿಯೋ ಸಾಕ್ಷಿಯಾದಂತಿದೆ. ಹಿರಿಯ ಪೊಲೀಸ್ ಅಧಿಕಾರಿ ಡಿ ರೂಪಾ ಅವರು ಮಾಡಿದ್ದ ಆರೋಪಕ್ಕೆ ಪೂರಕ ಎಂಬಂತೆ ಶಶಿಕಲಾಗೆ ನೀಡಲಾಗಿದ್ದ ಕೊಠಡಿ ಸೌಲಭ್ಯ ಕುರಿತಂತೆ ಮಾಧ್ಯಮಗಳಲ್ಲಿ ಬಯಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೋ ಬಹಿರಂಗಗೊಂಡಿದೆ.
ಈ ವಿಡಿಯೋದಲ್ಲಿ ಶಶಿಕಲಾ ರೇಷ್ಮೆ ಚೂಡಿದಾರ್ ಧರಿಸಿ ಫ್ಯಾನ್ಸಿ ಬ್ಯಾಗ್ ಹಿಡಿದು ಓಡಾಡುತ್ತಿದ್ದು ಅವರ ಹಿಂದೆಯೇ ಮತ್ತೊಬ್ಬ ಆರೋಪಿ ಇಳವರಸಿ ಜೈಲಿನ ಸಮವಸ್ತ್ರ ಧರಿಸದೆ ಓಡಾಡುತ್ತಿದ್ದಾರೆ.
ಶಶಿಕಲಾ ಅವರಿಗೆ 2 ಕೋಟಿ ಲಂಚ ಪಡೆದು ಅವರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಕಾರಾಗೃಹ ಡಿಐಜಿಯಾಗಿದ್ದ ಡಿ.ರೂಪಾ ಅವರು ಆರೋಪ ಮಾಡಿದ್ದರು.