ಮೆಟ್ರೊ ಸಿಬ್ಬಂದಿಗಳ ಜೊತೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ
ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್ ನಿಗಮದಡಿ ಎರಡನೇ ಹಂತದ ಯೋಜನೆಯಡಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೆಟ್ರೊ ನಿಲ್ದಾಣ ಸ್ಥಾಪನೆಗೆ 80ರಿಂದ 100 ಕೋಟಿ ರೂಪಾಯಿಗಳನ್ನು ಹೂಡಲು ಇನ್ಫೋಸಿಸ್ ಫೌಂಡೇಶನ್ ಮುಂದಾಗಿದೆ. ಮೆಟ್ರೊ ನಿಗಮದ ನವೀನ ಹಣಕಾಸು ಮಾದರಿಯಡಿ ಮೆಟ್ರೊ ನಿಲ್ದಾಣವನ್ನು ದತ್ತು ಪಡೆಯಲು ಇನ್ಫೋಸಿಸ್ ಫೌಂಡೇಶನ್ ನಿರ್ಧರಿಸಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ, ಮೆಟ್ರೊ ರೈಲಿನ ಜೊತೆ ಕೆಲಸ-ಕಾರ್ಯಗಳಲ್ಲಿ ಒಂದಾಗಲು ಹಲವು ವರ್ಷಗಳಿಂದ ಯೋಚಿಸುತ್ತಿದ್ದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ಫೋಸಿಸ್ ಮುಖ್ಯ ಕಚೇರಿಯಿರುವ ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೊ ಸ್ಟೇಷನ್ ಸ್ಥಾಪನೆಗೆ ನಾವು ಹಣ ಹೂಡುತ್ತಿದ್ದೇವೆ ಎಂದು ಹೇಳಿದರು.
ಮೆಟ್ರೊ ನಿಲ್ದಾಣಕ್ಕೆ ಹೂಡಿಕೆ ಮಾಡಲು ನಮಗೆ 2020ರವರೆಗೆ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ಸಾಕಷ್ಟು ಹಣ ಹೂಡಿಕೆಗೆ ವ್ಯವಸ್ಥೆ ಮಾಡಬಹುದು. ಈ ನಾಲ್ಕು ವರ್ಷಗಳಲ್ಲಿ ಬೇರೆ ಖರ್ಚು ವೆಚ್ಚಗಳನ್ನು ಸರಿದೂಗಿಸಬೇಕಾಗಿದೆ ಎಂದರು.
ಕುಶಲಕರ್ಮಿಗಳ ಪ್ರಚಾರ: ಮೆಟ್ರೊ ನಿಲ್ದಾಣಗಳಲ್ಲಿ ಖಾಲಿಯಿರುವ ಸ್ಥಳಗಳನ್ನು ಉಪಯೋಗಿಸಲು ಮುಂದಾಗಿರುವ ಸುಧಾ ಮೂರ್ತಿಯವರು, ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಮಾಡಲು ಸಾಧ್ಯವಾಗದಿರುವವರಿಗೆ ನೀಡಲು ಯೋಚಿಸುತ್ತಿದ್ದಾರೆ. ತಮ್ಮ ಕರಕುಶಲ ಕೆಲಸಗಳನ್ನು ಪ್ರದರ್ಶಿಸಲು ಕಲಾವಿದರಿಗೆ ವೇದಿಕೆ ಒದಗಿಸಲು ಬಯಸುತ್ತೇನೆ. ವಾರಾಂತ್ಯದಲ್ಲಿ ಬಡ ಕರಕುಶಲಕರ್ಮಿಗಳ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮೆಟ್ರೊ ನಿಲ್ದಾಣದಲ್ಲಿ ಅವಕಾಶ ಕಲ್ಪಿಸಲಾಗುವುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos