ತುಮಕೂರು: ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ವ್ಯಾಪಾರಿ ಅಪರಾಧಿ ಎಂದು ತಪ್ಪಾಗಿ ಭಾವಿಸಿ ಸೌದಿ ಅರೇಬಿಯಾದಲ್ಲಿ ಬಂಧಿತರಾಗಿದ್ದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ವ್ಯಾಪಾರಿಯನ್ನು ವಿದೇಶಾಂಗ ಇಲಾಖೆಯ ಮಧ್ಯ ಪ್ರವೇಶದಿಂದ ನಿನ್ನೆ ಬಿಡುಗಡೆ ಮಾಡಲಾಗಿದೆ.
ನನ್ನ ಹಿರಿಯ ಸೋದರ ನಯಾಝ್ ಅಹ್ಮದ್ ಫೋನ್ ಮಾಡಿ ಬಿಡುಗಡೆಯಾಗಿರುವುದಾಗಿ ಖಚಿತಪಡಿಸಿದ್ದಾರೆ ಎಂದು ಅವರ ಕಿರಿಯ ಸೋದರ ಫಯಾಝ್ ಅಹ್ಮದ್ ದೆಹಲಿಯಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ತಮ್ಮ ಯಾತ್ರೆ ಮುಗಿಸಿ ಇನ್ನು 5-6 ದಿನಗಳಲ್ಲಿ ಭಾರತಕ್ಕೆ ಮರಳುತ್ತಾರೆ ಎಂದು ಹೇಳಿದ್ದಾರೆ.
ತಮ್ಮ 32 ಸಹ ಯಾತ್ರಿಕರೊಂದಿಗೆ ನಯಾಝ್ ಅಹ್ಮದ್ ಸೌದಿ ಅರೇಬಿಯಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಏಪ್ರಿಲ್ 20ರಂದು ಜೆದ್ದಾ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ವಲಸೆ ಅಧಿಕಾರಿಗಳು ತಪ್ಪಾಗಿ ಭಾವಿಸಿ ಬಂಧಿಸಿದರು. ಈ ಹಿಂದೆ ಬೆಂಗಳೂರಿನಿಂದ ಬಂದಿದ್ದ ಅಪರಾಧಿಯೊಬ್ಬನ ಹೆಸರು ಮತ್ತು ಜನ್ಮ ದಿನಾಂಕದೊಂದಿಗೆ ನಯಾಝ್ ಹೆಸರು ಕೂಡ ಹೊಂದಿಕೆಯಾಗುತ್ತಿದ್ದುದರಿಂದ ಬಂಧಿಸಿದರು.
ನಯಾಝ್ ಬಂಧಿತರಾದ ವಿಷಯವನ್ನು ತುಮಕೂರು ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರ ಮೂಲಕ ಮೇ 22ರಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿದರು.
ಕೂಡಲೇ ಕಾರ್ಯಪ್ರವೃತ್ತವಾದ ವಿದೇಶಾಂಗ ಇಲಾಖೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ನಯಾಜ್ ನ ಸಂಪರ್ಕ ಕೂಡ ಸಿಕ್ಕಿತು. ಮೇ 23 ರಂದು ದೂರವಾಣಿ ಮೂಲಕ ಮಾತನಾಡಿ ಸುರಕ್ಷಿತ ಬಿಡುಗಡೆಯ ಭರವಸೆ ನೀಡಿದರು.
ಇಬ್ಬರು ಮಕ್ಕಳ ತಂದೆಯಾಗಿರುವ ನಯಾಝ್ ತುರುವೇಕೆರೆ ಪಟ್ಟಣದಲ್ಲಿ ತಮ್ಮ ತಂದೆ ಅನ್ಸಾರ್ ಅಹ್ಮದ್ ಜೊತೆಗೆ ಟಿಂಬರ್ ವ್ಯಾಪಾರ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics