ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ವಿಪ್ರೋಗೆ ಮತ್ತೊಂದು ಬೆದರಿಕೆ ಮೇಲ್: 500 ಕೋಟಿ ರು ಹಣ ನೀಡುವಂತೆ ಬೇಡಿಕೆ

ಟಿ ದಿಗ್ಗಜ ವಿಪ್ರೋ ಕಂಪನಿಗೆ ಬುಧವಾರ ಮತ್ತೊಂದು ಬೆದರಿಕೆ ಈ ಮೇಲ್ ಬಂದಿದ್ದು, 500 ಕೋಟಿ ರು ಹಣ ನೀಡುವಂತೆ ಬೇಡಿಕೆ ...

ವಿಪ್ರೋ
Shilpa D
Updated On : 2 Jun 2017, 2:14 am
ಬೆಂಗಳೂರು: ಐಟಿ ದಿಗ್ಗಜ ವಿಪ್ರೋ ಕಂಪನಿಗೆ ಬುಧವಾರ ಮತ್ತೊಂದು ಬೆದರಿಕೆ ಈ ಮೇಲ್ ಬಂದಿದ್ದು, 500 ಕೋಟಿ ರು ಹಣ ನೀಡುವಂತೆ ಬೇಡಿಕೆ ಇಡಲಾಗಿದೆ.
72 ಗಂಟೆಗಳಲ್ಲಿ ಹಣ ನೀಡಬೇಕು ಇಲ್ಲದಿದ್ದರೇ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ. ಕಳೆದ ಒಂದು ತಿಂಗಳಲ್ಲಿ ಬಂದಿರುವ ಎರಡನೇ ಬೆದರಿಕೆ ಮೇಲ್ ಇದಾಗಿದೆ. 
20 ದಿನದಲ್ಲಿ 500 ಕೋಟಿ ರುಪಾಯಿ ಕೊಡಿ ಇಲ್ಲದಿದ್ದರೆ ಕಚೇರಿ ಆವರಣ ಸೇರಿದಂತೆ ಹಲವು ಕಡೆ ವಿಷಕಾರಿ ಪ್ರೋಟೀನ್ ಡ್ರಗ್ ಹಾಕುತ್ತೇವೆ ಎಂದು ಕಳೆದ ಮೇ 5 ರಂದು ಬೆದರಿಕೆ ಹಾಕಲಾಗಿತ್ತು.

Advertisement

Advertisement

ಎರಡನೇ ಬಾರಿಗೆ ಬೆದರಿಕೆ ಈ ಮೇಲ್ ಬಂದಿರುವುದನ್ನು ವಿಪ್ರೋ ಸಂಸ್ಥೆ ಸ್ಪಷ್ಟ ಪಡಿಸಿದೆ. ಕಂಪನಿಗಳಿರುವ ಎಲ್ಲಾ ಪ್ರದೇಶಗಳಲ್ಲಿಯೂ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸಂಸ್ಥೆಯ ದೈನಂದಿನ ಕಾರ್ಯ ಚಟುವಟಿಗೆಳ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ಹೇಳಿದೆ.
ಎರಡು ಮೇಲ್ ಗಳು ಸ್ವಿಟ್ಜರ್ ಲ್ಯಾಂಡ್ ನ ಒಂದೇ ಐಪಿ ಮತ್ತು ಐಡಿ ವಿಳಾಸದಿಂದ ಬಂದಿವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. Ramesh2@protonmail.com ಮೇಲ್ ಐಡಿಯಿಂದ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments