ರಾಜ್ಯ

ರೇಷ್ಮೆ ಕೃಷಿ ವಿಭಾಗ ಸ್ನಾತಕೋತ್ತರ ಕೋರ್ಸ್ ಗಳ ದಿನಾಂಕ ಮುಂದೂಡಿದ ಬೆಂಗಳೂರು ವಿ.ವಿ

Sumana Upadhyaya
ಬೆಂಗಳೂರು: ಪರೀಕ್ಷೆಯ ದಿನಾಂಕಗಳನ್ನು ಮುಂದೂಡುವ ಮೂಲಕ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ರೇಷ್ಮೆ  ಕೃಷಿ ವಿಭಾಗ ಗೊಂದಲದಲ್ಲಿ ಸಿಲುಕಿಸಿದೆ.
ಆರಂಭದಲ್ಲಿ ರೇಷ್ಮೆ ಕೃಷಿ ವಿಭಾಗ/ ಜೀವ ವಿಜ್ಞಾನ ಪರೀಕ್ಷೆಗಳನ್ನು ಜುಲೈ 11ರಂದು ಆರಂಭಿಸುವ ಯೋಜನೆಯಲ್ಲಿತ್ತು ವಿಶ್ವ ವಿದ್ಯಾಲಯ. ಆದರೆ ಮೊನ್ನೆ ಶುಕ್ರವಾರ ವಿಶ್ವವಿದ್ಯಾಲಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದೀಗ ಪರೀಕ್ಷೆ ಜೂನ್ 28ರಿಂದ ಆರಂಭವಾಗಲಿದೆ. ಇದನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಜ್ಞಾನಭಾರತಿ ಕ್ಯಾಂಪಸ್ ಎದುರು ಪ್ರತಿಭಟನೆ ನಡೆಸಿದರು.
ಪ್ರಶಾಂತ್ ಎಂಬ ವಿದ್ಯಾರ್ಥಿ, ಅನೇಕ ವಿದ್ಯಾರ್ಥಿಗಳು ತಮಗೆ ಅಧ್ಯಯನಕ್ಕೆಂದು ರಜೆಯಿದೆಯೆಂದು ಭಾವಿಸಿ ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ಅವರಿಗೆ ಈ ಬದಲಾವಣೆ ಹೇಗೆ ಗೊತ್ತಾಗಬೇಕು? ವಿಶ್ವವಿದ್ಯಾಲಯ ನಮಗೆ ಯಾವತ್ತಿಗೂ ಇಮೇಲ್ ಆಗಲಿ ಎಸ್ಎಂಎಸ್ ಆಗಲಿ ಕಳುಹಿಸುವುದಿಲ್ಲ ಎಂದರು.
ಈ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಪ್ರೊ. ಶಂಕರ್ ರೆಡ್ಡಿ ಅವರನ್ನು ಸಂಪರ್ಕಿಸಿದಾಗ, ಮುದ್ರಣ ದೋಷದಿಂದ ಪರೀಕ್ಷೆ ಜುಲೈ 11ಎಂದು ಮುದ್ರಣವಾಗಿದೆ. ಆರಂಭದಲ್ಲಿಯೇ ಪರೀಕ್ಷೆ ಜೂನ್ 28ಕ್ಕೆ ನಿಗದಿಯಾಗಿತ್ತು. ನಾವೀಗ ಪರಿಷ್ಕೃತ ವೇಳಾಪಟ್ಟಿಯನ್ನು ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
ತಿರಸ್ಕಾರ ವಿರುದ್ಧ ಪ್ರತಿಭಟನೆ: ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ  ತಿರಸ್ಕಾರ ವಿರುದ್ಧ ಮತ್ತು ಮೂಲ  ವಿಶ್ವವಿದ್ಯಾಲಯದ ಸಂಪನ್ಮೂಲಗಳನ್ನು ಎರಡು ಹೊಸ ವಿಶ್ವವಿದ್ಯಾಲಯಗಳ ಜೊತೆಗೆ ಹಂಚಿಕೊಳ್ಳುವುದರ ವಿರುದ್ಧ ಪ್ರತಿಭಟನೆ ನಡೆಸಿದೆ. ಬೆಂಗಳೂರು ವಿಶ್ವವಿದ್ಯಾಲಯವನ್ನು ಕೇಳುವ ಬದಲು ಸರ್ಕಾರವೇ ಹಣ ಒದಗಿಸುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ. ಸದ್ಯದಲ್ಲಿಯೇ ಉನ್ನತ ಶಿಕ್ಷಣ ಸಚಿವರ ಮುಂದೆ ಪ್ರಾತಿನಿಧ್ಯವನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
SCROLL FOR NEXT