ಮೈಸೂರು: ಒಂದು ನಿಮಿಷದಲ್ಲಿ ಕಠಿಣವಾದ ನಿರಾಲಂಬ ಪೂರ್ಣ ಚಕ್ರಾಸನ ಎಂಬ ಭಂಗಿಯನ್ನು 15 ಬಾರಿ ಮಾಡಿ ಮೈಸೂರಿನ ಬಾಲಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
13 ವರ್ಷದ ಯೋಗಪಟು ಖುಷಿ, ಮೈಸೂರಿನ ನೋಟು ಮುದ್ರಣ ನಗರದ ಸಮುದಾಯದ ಭವನದಲ್ಲಿ ನಿರಾಲಂಬ ಪೂರ್ಣ ಚಕ್ರಾಸನ ಭಂಗಿ ಹೋಲುವ ಕಲಾತ್ಮಕ ಯೋಗ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದಾರೆ.
ನಿಂತುಕೊಂಡೇ ಒಂದು ನಿಮಿಷದಲ್ಲಿ 15 ಬಾರಿ ಹಿಮ್ಮುಖವಾಗಿ ಭಾಗಿ ತಲೆ ಹಾಗೂ ಬೆನ್ನನ್ನು ನೆಲಕ್ಕೆ ಸ್ಪರ್ಶಿಸಿ ಕೇವಲ ಹಿಮ್ಮಡಿ ಬಲದಿಂದಲೇ ಮೇಲೆದ್ದರು.ಈ ಸಾಧನೆಗಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರತಿನಿಧಿ ಸಂತೋಷ್ ಅಗರವಾಲ್ ಪ್ರಶಸ್ತಿಪತ್ರ ನೀಡಿದರು.
ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಖುಷಿ ಈಗಾಗಲೇ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಜಯಿಸಿದ್ದಾರೆ.
2016 ರಲ್ಲಿ ಖುಷಿ ವಿಯೆಟ್ನಾಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಚಿನ್ನ, ಎರಡು ಬೆಳ್ಳಿ ಪದಕ ಗಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos