ಬೆಂಗಳೂರು: ಮೆಟ್ರೋ ರೈಲಿನಲ್ಲಿ ಸಂಚರಿಸಿದ ಸಿಎಂ ಸಿದ್ದರಾಮಯ್ಯ
ಉದ್ಘಾಟನೆಗೆ ಸಜ್ಜಾಗಿರುವ ಮೆಟ್ರೋ ರೈಲಿನ ಪರಿಶೀಲನೆಗಾಗಿ ಸಿಎಂ ಸಿದ್ದರಾಮಯ್ಯ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಈ ವೇಳೆ ಅವರಿಗಾಗಿ ಕಾಯುತ್ತಿದ್ದ ..
ಬೆಂಗಳೂರು: ಉದ್ಘಾಟನೆಗೆ ಸಜ್ಜಾಗಿರುವ ಮೆಟ್ರೋ ರೈಲಿನ ಪರಿಶೀಲನೆಗಾಗಿ ಸಿಎಂ ಸಿದ್ದರಾಮಯ್ಯ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಈ ವೇಳೆ ಅವರಿಗಾಗಿ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡದೇ ನಿರಾಶೆ ಮೂಡಿಸಿದರು.
ನಾಡ ಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಅವರ ಜೊತೆ ಆಗಮಿಸಿದ ಸಿದ್ದರಾಮಯ್ಯ, ಅಲ್ಲಿ ನೆರೆದಿದ್ದ ಸಾರ್ವಜನಿಕರು ಮತ್ತು ಮಾಧ್ಯಮದವರನ್ನು ಮಾತನಾಡಿಸದೇ ಸೀದಾ ರೈಲು ಹತ್ತಿ ಪ್ರಯಾಣ ಬೆಳೆಸಿದರು.
ಕೆಜಿ ಮೆಟ್ರೋ ನಿಲ್ದಾಣದಿಂದ ರಾಷ್ಟ್ರೀಯ ವಿದ್ಯಾಲಯದವರೆಗೆ ಸಿಎಂ ಮೆಟ್ರೋದಲ್ಲಿ ಸಂಚರಿಸಿದರು, ನಂತರ ರಾಷ್ಚ್ರೀಯ ವಿದ್ಯಾಲಯ ಸ್ಟಾಪ್ ಬಳಿ ಸಿಎಂ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾರೆ ಎಂದು ಹೇಳಲಾಯಿತು, ಆದರೆ ಅಲ್ಲಿಯೂ ಸಿಎಂ ಮಾತನಾಡಲಿಲ್ಲ, ಸಿಎಂ ಇದ್ದ ಬೋಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ತುಂಬಿದ್ದರು.
ಸಿಎಂ ಸಿದ್ದರಾಮಯ್ಯ ಉದ್ಘಾಟನೆಗೆ ಸಜ್ಜಾಗಿರುವ ಮೆಟ್ರೋ ಮಾರ್ಗದ ಪರಿಶೀಲನೆ ನಡೆಸುವುದಿಲ್ಲ ಎಂದು ಬುಧವಾರ ಅಂತಿಮ ಸಮಯದಲ್ಲಿ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿತ್ತು, ಇದರಿಂದ ಮೆಟ್ರೋ ಅಧಿಕಾರಿಗಳು ಮಾಧ್ಮದವರ ಕೋಪಕ್ಕೆ ಗುರಿಯಾಗಬೇಕಾಯಿತು.
ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ರಾಷ್ಟ್ರೀಯ ವಿದ್ಯಾಲಯದವರೆಗೆ ಪ್ರಯಾಣಿಸಿದರು. ಈ ವೇಳೆ ಕೆ.ಆರ್ ಮಾರುಕಟ್ಟೆ ಮತ್ತು ಚಿಕ್ಕಪೇಟೆ ನಿಲ್ದಾಣಗಳಲ್ಲಿ 30 ಸೆಕೆಂಡುಗಳ ಕಾಲ ರೈಲನ್ನು ನಿಲ್ಲಿಸಲಾಗಿತ್ತು.
ಮೆಟ್ರೋದಲ್ಲಿ ಸಂಚರಿಸಿದ ಸಿಎಂ ತುಂಬಾ ಖುಷಿ ಪಟ್ಟರು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.