ರಾಜ್ಯ

ಬೆಂಗಳೂರು ನಾಗರಿಕರಿಗೆ ಸಮಸ್ಯೆಯಾಗಿರುವ ಆಸ್ತಿ ತೆರಿಗೆ ಪಾವತಿ

Sumana Upadhyaya
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ವರ್ಷ ಆಸ್ತಿ ತೆರಿಗೆ ಪಾವತಿ ಜನರಿಗೆ ನಿಜಕ್ಕೂ ತಲೆನೋವಾಗಿದೆ. ಶ್ರೀಪತಿ ಎಂಬ ನಿವೃತ್ತ ಮೆಕಾನಿಕಲ್ ಎಂಜಿನಿಯರ್ 2015-16ಕ್ಕೆ ತಮ್ಮ ಮನೆಗೆ 9,411 ರೂಪಾಯಿ ಸಂಪೂರ್ಣ ತೆರಿಗೆ ಪಾವತಿಸಿದ್ದರು. ಆದರೆ ಕಳೆದ ಏಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿ ಪೋರ್ಟಲ್ ನ್ನು ನೋಡಿದಾಗ ಕಳೆದ ವರ್ಷದ ತೆರಿಗೆ ಪಾವತಿಸಲು 18,820 ರೂಪಾಯಿ 90 ಪೈಸೆ ಬಾಕಿ ಇದೆ ಎಂದು ತೋರಿಸಿತ್ತು.
ರಾಮಗುಂಡನಹಳ್ಳಿಯ ಸ್ಥಳೀಯ ಬಿಬಿಎಂಪಿ ಕಚೇರಿಗೆ ಹೋಗಿ ಕೇಳಿದಾಗ ಇದು ಸಾಫ್ಟ್ ವೇರ್ ಸಮಸ್ಯೆಯಾಗಿದ್ದು, ತಮಗೇನು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಹಾಯಕ ಕಂದಾಯ ಅಧಿಕಾರಿಗಳು ಲಾಗಿನ್ ಐಡಿಗಳನ್ನು ವೆಬ್ ಸೈಟ್ ಗಳಿಗೆ ನೀಡಿದ್ದು, ಅವರಿಗೆ ಸ್ಥಳೀಯ ಬಿಬಿಎಂಪಿ ಕಚೇರಿಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವ ಸಾಧ್ಯತೆಯಿದೆ.
SCROLL FOR NEXT