ಬೆಂಗಳೂರು: ಪೊಲೀಸರ ರಕ್ಷಣೆ ಕೋರಿದ ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್
ಸಿಎಂ ಸಿದ್ದರಾಮಯ್ಯನವರ ಹಿರಿಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯನವರ ಪತ್ನಿ ಸ್ಮಿತಾ ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ಮಲ್ಲೇಶ್ವರಂ ಪೊಲೀಸ್ ಠಾಣೆಗೆ...
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಹಿರಿಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯನವರ ಪತ್ನಿ ಸ್ಮಿತಾ ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೂನ್ 15 ರಂದು ಅಂದ್ರೆ ಎರಡು ದಿನಗಳ ಹಿಂದೆ ಸ್ಮಿತಾ ಪತ್ರ ಬರೆದಿದ್ದು 15 ನೇ ತಾರೀಕು ಮಧ್ಯರಾತ್ರಿ 2 ಗಂಟೆ ವೇಳೆಗೆ ನಮ್ಮ ಮನೆಯ ಹೊರಗಿನ ವರಾಂಡಾದಲ್ಲಿ ಶಬ್ದವಾಯಿತು. ಈ ವೇಳೆ ನಮ್ಮ ಮನೆಯ ನಾಯಿ ಬೊಗಳಿದೆ. ಯಾರೋ ಕಿಡಿಗೇಡಿಗಳು ಬಂದಿದ್ದಕ್ಕೆ ಸಾಕ್ಷಿಯಾಗಿ ಮರದ ಹಲಸಿನ ಕಾಯಿಗಳು ಉದುರಿವೆ.
ಅದು ರಾತ್ರಿ ನಡೆದ ಘಟನೆಯಲ್ಲಿ ನಮ್ಮ ಮನೆಯ ವರಾಂಡದ ಟ್ಯೂಬ್ ಲೈಟ್ ಕೂಡಾ ಒಡೆದಿದ್ದು ಇದು ಕಳ್ಳರ ಕೃತ್ಯ ಎನ್ನಿಸುತ್ತಿಲ್ಲ. ಅಲ್ಲದೇ ನನಗೆ ಏನಾದ್ರೂ ಅಪಾಯವಾಗಬಹುದೆಂದು ಅನ್ನಿಸುತ್ತಿದೆ. ಮನೆಯಲ್ಲಿ ನಾನು ನನ್ನ ತಾಯಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದೇನೆ ಹೀಗಾಗಿ ಸೂಕ್ತ ರಕ್ಷಣೆ ನೀಡಬೇಕೆಂದು ಸ್ಮಿತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿಎಂ ಸೊಸೆಯೇ ಸ್ವತಃ ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿರೋದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.