ರಾಜ್ಯ

ರಾಜ್ಯದಲ್ಲಿ 2,869 ನಕಲಿ ವೈದ್ಯರ ಪತ್ತೆ, ನಾಟಿ ವೈದ್ಯರು ನಕಲಿಗಳಲ್ಲ: ರಮೇಶ್ ಕುಮಾರ್

Lingaraj Badiger
ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ಒಟ್ಟು 2,869 ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನಾಟಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವವರು ನಕಲಿ ವೈದ್ಯರಲ್ಲ ಎಂದು ಸೋಮವಾರ ಸರ್ಕಾರ ಸ್ಪಷ್ಟಪಡಿಸಿದೆ.
ಇಂದು ವಿಧಾನ ಪರಿಷತ್‌ ನಲ್ಲಿ ಬಿಜೆಪಿಯ ಎಸ್.ಪಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು, ರಾಜ್ಯದಲ್ಲಿ ಒಟ್ಟು 2,869 ನಕಲಿ ವೈದ್ಯರನ್ನು ಪತ್ತೆ ಹಚಲಾಗಿದ್ದು, ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ 634, ಕೋಲಾರ ಜಿಲ್ಲೆಯಲ್ಲಿ 273, ಬೀದರ್‌ನಲ್ಲಿ 276, ಬಿಜಾಪುರದಲ್ಲಿ 195, ಬೆಳಗಾವಿಯಲ್ಲಿ 160 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 8 ನಕಲಿ ವೈದ್ಯರಿದ್ದಾರೆ ಎಂದರು.
ನಿಜವಾದ ವೈದ್ಯರು ಯಾರು, ನಕಲಿ ವೈದ್ಯರು ಯಾರು ಎಂಬುದನ್ನು ಪತ್ತೆಹಚ್ಚಲು ಸಮಿತಿಯೊಂದನ್ನು ರಚಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ. 
ಇದೇ ವೇಳೆ ಹಲವಾರು ವರ್ಷಗಳಿಂದ ನಾಟಿ ವೈದ್ಯರು ನೀಡುತ್ತಿರುವ ಚಿಕಿತ್ಸೆಯಿಂದ ಅನಾರೋಗ್ಯ ಪೀಡಿತರಿಗೆ ಹೆಚ್ಚು ಪ್ರಯೋಜನವಾಗಿದೆ. ಅಂತಹ ವೈದ್ಯರನ್ನು ಕಾಪಾಡುವ ಸಲುವಾಗಿ ನಾಟಿ ವೈದ್ಯರು ಹಾಗೂ ಆರ್.ಎಂ.ಪಿ. ವೈದ್ಯರು ಯುನಾನಿ ವೈದ್ಯರುಗಳನ್ನು ಪ್ರತ್ಯೇಕಿಸಿ ಅವರಿಗೆ ರಕ್ಷಣೆ ನೀಡುವ ಸಲುವಾಗಿ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.
SCROLL FOR NEXT