ಬೆಂಗಳೂರು: ಮಕ್ಕಳು ಭಿಕ್ಷೆ ಬೇಡುವ ಸಮಸ್ಯೆಯನ್ನು ತಪ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೈಲು ಕೈಪಿಡಿ ಷರತ್ತನ್ನು ಜಾರಿಗೆ ತರಲು ನಿರ್ಧರಿಸಿದೆ.
ನಿನ್ನೆ ವಿಧಾನ ಪರಿಷತ್ತಿನಲ್ಲಿ ಈ ವಿಷಯ ತಿಳಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ, ಜೈಲಿನ ಕೈಪಿಡಿಯಲ್ಲಿ ಸೂಚಿಸಿದ ಮಾರ್ಗಸೂಚಿಗಳನ್ನು ಅಳವಡಿಸಲಾಗುವುದು. ಅದರ ಪ್ರಕಾರ ಮಗುವಿಗೆ 6 ವರ್ಷ ತುಂಬುವವರೆಗೆ ತಾಯಿ ಮತ್ತು ಮಗುವನ್ನು ಜೊತೆಯಲ್ಲಿ ಇರಿಸಲಾಗುವುದು ಎಂದು ಹೇಳಿದರು.
ಮಕ್ಕಳ ಹಕ್ಕುಗಳು ಮತ್ತು ಅನೇಕ ಪದ್ಧತಿಗಳ ಮೂಲಕ ಮಕ್ಕಳ ಶೋಷಣೆ ನಡೆಯುವುದರ ವಿರುದ್ಧ ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವೆ ಉಮಾಶ್ರೀ, ನಾವು ತಾಯಿ ಮತ್ತು ಮಗುವನ್ನು ಒಟ್ಟಿಗೆ ಇರಿಸುತ್ತೇವೆ. ಮಗುವಿಗೆ ಆರು ವರ್ಷವಾದ ತಕ್ಷಣ ಮಗುವನ್ನು ಬಾಲ ಕಾರಾಗೃಹಕ್ಕೆ ವರ್ಗಾಯಿಸಿ ತಾಯಿಯನ್ನು ಬಿಡುಗಡೆ ಮಾಡುತ್ತೇವೆ. ಈ ಕಾನೂನನ್ನು ಸದ್ಯದಲ್ಲಿಯೇ ಜಾರಿಗೆ ತರಲಾಗುವುದು ಎಂದು ಹೇಳಿದರು.
ರಸ್ತೆಗಳಲ್ಲಿ ಮಕ್ಕಳು ಭಿಕ್ಷೆ ಬೇಡುವುದು ಪೊಲೀಸ್ ಮತ್ತು ಮಹಿಳಾ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics