ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದಲ್ಲಿ ಕ್ಷೀಣಗೊಂಡ ಮುಂಗಾರು: ಜಲಾಶಯಗಳಲ್ಲಿ ತಗ್ಗಿದ ನೀರಿನ ಪ್ರಮಾಣ

ರ್ನಾಟಕಕ್ಕೆ ಮುಂಗಾರು ಪ್ರವೇಶಿಸಿ 15 ದಿನ ಕಳೆದರು ಮಾನ್ಸೂಮ್ ಮಾರುತಗಳು ಇನ್ನೂ ಚೇತರಿಸಿಕೊಳ್ಳಗದೇ ಕ್ಷೀಣವಾಗಿದೆ. ಪ್ರಮುಖ ಮಳೆ ಬೀಳುವ ..

ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿ 15 ದಿನ ಕಳೆದರು ಮಾನ್ಸೂಮ್ ಮಾರುತಗಳು ಇನ್ನೂ ಚೇತರಿಸಿಕೊಳ್ಳಗದೇ ಕ್ಷೀಣವಾಗಿದೆ. ಪ್ರಮುಖ ಮಳೆ ಬೀಳುವ ಪ್ರದೇಶಗಳಾದ,ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಕಳೆದ ವಾರ ಅತಿ ಕಡಿಮೆ ಮಳೆಯಾಗಿದೆ.
ಯಾವಾಗಲೂ ಬೀಳುತ್ತಿದ್ದ ಮಳೆಗಿಂತ ಶೇ. 40 -50 ರಷ್ಟು ಮಳೆ ಕಡಿಮೆಯಾಗಿದೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಗುರುತಿಸಿಕೊಂಡಿರುವ ಸ್ಥಳಗಳಲ್ಲಿ ಮುಂಗಾರು ದುರ್ಬಲಗೊಂಡಿದೆ. ಇದೇ ಪರಿಸ್ಥಿತಿ ಮುಂದುವರೆಯಲಿದ್ದು ಜೂನ್ 24 ರ  ನಂತರ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡು ಮತ್ತು ಕರಾವಳಿ ತೀರಗಳಲ್ಲಿ ಸರಾಸರಿಗಿಂತ ಮಳೆ ಪ್ರಮಾಣ ಕಡಿಮೆಯಾಗಿದೆ, ಕರಾವಳಿ ತೀರದಲ್ಲಿ ಶೇ.48 ಹಾಗೂ ಮಲೆನಾಡು ಭಾಗದಲ್ಲಿ ಶೇ.40 ರಷ್ಟು ಮಾತ್ರ ಮಳೆಯಾಗಿದೆ.
ಕೊಡಗಿನಲ್ಲಿ ಸರಾಸರಿಗಿಂತ ಮಳೆ ತೀರಾ ಕಡಿಮೆಯಾಗಿದ್ದು, ಶೇ.40 ರಷ್ಟು ಮಾತ್ರ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಕೇವಲ ಶೇ.35 ರಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಉತ್ತರ ಒಳನಾಡು ಕರ್ನಾಟಕದಲ್ಲಿ ಮಾತ್ರ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದೆ.
ಕೆಆರ್ ಎಸ್ ಮತ್ತು ಹೇಮಾವತಿ ಜಲಾಶಯಗಳಲ್ಲಿ  ಒಳಹರಿವು ಕಡಿಮೆಯಾಗಿದೆ, ಕಳೆದ ವರ್ಷ ಈ ವೇಳೆಯಲ್ಲಿ ಕೆಆರ್ ಎಸ್ ನಲ್ಲಿ  72.42 ಅಡಿ ನೀರಿತ್ತು, ಆದರೆ ಈ ಬಾರಿ ಕೇವಲ 6795 ಅಡಿ ನೀರು ಮಾತ್ರ ಸಂಗ್ರಹವಾಗಿದೆ.
ಹೇಮಾವತಿ ನದಿಯಲ್ಲಿ ಕಳೆದ ವರ್ಷ 3.3 ಟಿಎಂಸಿ ಅಡಿ ನೀರಿದ್ದರೇ, ಈ ವರ್ಷ ಕೇವಲ 2.01 ಅಡಿ ನೀರು ಮಾತ್ರ ಬಾಕಿಉಳಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT