ರಾಜ್ಯ

ರಾಮಚಂದ್ರಾಪುರ ಮಠದ ಹಸುಗಳನ್ನು ನೀಡುವಂತೆ ಕೇರಳದ ಕಾರಾಗೃಹ ಕೋರಿಕೆ

Shilpa D
ಕಾರವಾರ: ಕೇರಳದಲ್ಲಿ ಕಳೆದ ತಿಂಗಳು ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕವಾಗಿ ಕರುವನ್ನು ಕೊಂದ ಘಟನೆಗೆ ಇಡಿ ದೇಶವೇ ಆಘಾತ ವ್ಯಕ್ತಪಡಿಸಿತ್ತು. ಒಂದು ತಿಂಗಳ ನಂತರ ಕೇರಳದ ಕಾರಾಗೃಹವು ಕರ್ನಾಟಕದ ಹಸುಗಳನ್ನು ನೀಡುವಂತೆ ಕೋರಿದೆ.
ತನ್ನ ಬಂಜರು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಮಾಡಲು ಕರ್ನಾಟಕದ ಹಸುಗಳನ್ನು ನೀಡಬೇಕೆಂದು ಕೋರಿದೆ.
ಕಾಸರಗೋಡು ಜಿಲ್ಲೆಯ ಚೀಮಿನಿ ಜೈಲಿನ ಕೈದಿ ರಾಮಚಂದ್ರಾಪುರ ಮಠದಿಂದ ಮಲೆನಾಡಿನ ಗಿಡ್ ತಳಿ ಹಾಗೂ ಘಾಟ್ ಪ್ರದೇಶದ ಡ್ವಾರ್ಫ್ ತಳಿಯ 18 ಹಸುಗಳನ್ನು ನೀಡುವಂತೆ ಮನವಿ ಮಾಡಿದೆ. ಈ ಜೈಲು  308 ಎಕರೆ ಜಮೀನು ಹೊಂದಿದ್ದು, ಸುಮಾರು 180 ಕೈದಿಗಳು ಕೃಷಿ ಕೆಲಸ ಮಾಡಲು ಆಸಕ್ತಿ ವಹಿಸಿದ್ದಾರೆ.
ಈ ಭೂಮಿ ಕಲ್ಲಿನಿಂದ ಕೂಡಿದೆ ಇದು ಕೃಷಿಗೆ ಯೋಗ್ಯವಾಗಿಲ್ಲ, ಹೀಗಾಗಿ ಇದನ್ನು ಫಲವತ್ತಾದ ಭೂಮಿಯಾಗುತ್ತದೆ. ಭೂಮಿಯನ್ನು ಫಲವತ್ತಾಗಿ ಮಾಡಲು ಹಸುವಿನ ಸಗಣಿ  ಮತ್ತು ಎಲೆಗೆಳ ಕಸವನ್ನುಹಾಕಿ ಪುರಾತನ ಶೈಲಿಯ ಕೃಷಿ ಮಾಡಲು ಕಾರಾಗೃಹ ನಿರ್ಧರಿಸಿದೆ. 
ಕೇರಳ ಕಾರಾಗೃಹ 18 ಹಸುಗಳನ್ನು ನೀಡುವಂತೆ ರಾಮಚಂದ್ರಾಪುರ ಮಠಕ್ಕೆ ಪತ್ರ ಬರೆದಿದೆ. ನಾವು ಈಗಾಗಲೇ ಅಂದರೆ ಜನವರಿ 2017 ರಂದು 2 ಹಸಗಳನ್ನು ಉಡುಗೊರೆಯಾಗಿ ನೀಡಲಾಗಿದೆ, ಉಳಿದ ಹಸುಗಳನ್ನು ಶೀಘ್ರವೇ ಕಳುಹಿಸಲಾಗುವುದು ಎಂದು ಮಠದ ರಾಮಚಂದ್ರ ಅಜ್ಜಕನ ಹೇಳಿದ್ದಾರೆ.
ಜನವರಿಯಲ್ಲಿ ಎರಡು ಹಸುಗಳನ್ನು ಕೇರಳಕ್ಕೆ ಉಡುಗೊರೆಯಾಗಿ ನೀಡಿದಾಗ ಇದರ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಸಂಪ್ರದಾಯಂತೆ ಎರಡು ಹಸುಗಳನ್ನು ಜೈಲಿನಲ್ಲಿ ಸ್ವಾಗತಿಸಲಾಯಿತು. ಇದರ ಬಗ್ಗೆ ಕೇರಳ ಡಿಜಿಪಿ ಈ ಸಂಬಂಧ ತನಿಖೆ ನಡೆಸುವಂತೆ ಆದೇಶಿಸಿದ್ದರು.  ಜೊತೆಗೆ ಕೇರಳ ಜೈಲು ಸೂಪರಿಂಡೆಂಟ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.
ಹಸುಗಳ ಸೆಗಣಿ ಮತ್ತು ಮೂತ್ರ ಬಳಸಿ ಕೃಷಿ ಉತ್ಪನ್ನಗಳನ್ನು ಜೀವನಾಮೃತ ಎಂಬ ಹೆಸರಿನಿಂದ ಉತ್ಪಾದನೆ ಮಾಡಲಾಗುತ್ತದೆ. ಜೊತೆಗೆ ಮೇಕೆ, ಮೊಲ  ಹಾಗೂ ಕೋಳಿಗಳನ್ನ ಈ ಜಮೀನಿನಲ್ಲಿ ಸಾಕಲು ಉದ್ದೇಶಿಸಲಾಗಿದೆ ಎಂದು ಕಾರಾಗೃಹ ಅಧಿಕಾರಿ ಶಿವಪ್ರಸಾದ್ ಹೇಳಿದ್ದಾರೆ.
SCROLL FOR NEXT