ಬೆಳಗಾವಿ: ಕಚ್ಚಿದ್ದ ಹಾವನ್ನು ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬುಧವಾರ ಸವದತ್ತಿ ತಾಲೂಕಿನ ಓಬದಿನ್ನಿ ಗ್ರಾಮದ ಲಕ್ಷ್ಮಣ ನಿಂಬಣ್ಣವರ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಂಗಳವಾರ ರಾತ್ರಿ ಹಾವು ಕಚ್ಚಿದೆ. ತಕ್ಷಣವೇ ಆತ ಹಾಸಿಗೆಯಿಂದ ಎದ್ದು ಕಚ್ಚಿದ ಹಾವನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಸತ್ತ ಹಾವನ್ನು ಹಾಕಿಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.
ನಂತರ ಆತನನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿಯತು.ಆದರೆ ಚಿಕಿತ್ಸೆ ನೀಡುವ ವೇಳೆ ಆತ ಸಾವನ್ನಪ್ಪಿದ್ದಾನೆ.
ಬ್ಯಾಗ್ ನಲ್ಲಿದ್ದ ಹಾವನ್ನು ನೋಡಿ ಆಸ್ಪತ್ರೆ ಸಿಬ್ಬಂದಿ ಭಯಭೀತರಾಗಿ ಅದನ್ನು ಅಲ್ಲಿಂದ ಹೊರ ತೆಗೆದು ಕೊಂಡು ಹೋಗುವಂತೆ ಸೂಚಿಸಿದ್ದಾರೆ. ನಿಂಬಣ್ಣವರ್ ಸಂಬಂಧಿಕರು ಹಾವನ್ನು ಆರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics