ಸದತ್ ಖಾನ್ 
ರಾಜ್ಯ

ಬೆಂಗಳೂರು: ಮ್ಯಾಟ್ರಿಮೊನಿ ಸೈಟ್ ಗಳ ಮೂಲಕ ಮಹಿಳೆಯರನ್ನು ವಂಚಿಸುತ್ತಿದ್ದ ಯುವಕನ ಬಂಧನ

ಮ್ಯಾಟ್ರಿಮೊನಿಯಲ್ ಸೈಟ್ ಗಳ ಮುಖಾಂತರ ಮಹಿಳೆಯರನ್ನು ವಂಚಿಸಿ ಅವರಿಂದ ಹಣ ಕೀಳುತ್ತಿದ್ದ 28...

ಬೆಂಗಳೂರು: ಮ್ಯಾಟ್ರಿಮೊನಿಯಲ್ ಸೈಟ್ ಗಳ ಮುಖಾಂತರ ಮಹಿಳೆಯರನ್ನು ವಂಚಿಸಿ ಅವರಿಂದ ಹಣ ಕೀಳುತ್ತಿದ್ದ 28 ವರ್ಷದ ಯುವಕನನ್ನು ಬಗಲೂರು ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ಸದತ್ ಖಾನ್ ಆರೋಪಿಯಾಗಿದ್ದು, ಈತ ಬೆಂಗಳೂರಿನಲ್ಲಿ 2011ರಿಂದ ವಾಸಿಸುತ್ತಿದ್ದಾನೆ. ವಯಸ್ಸಾಗಿ ಮದುವೆಯಾಗದಿರುವ ಮತ್ತು ವಿಚ್ಛೇದಿತ ಮಹಿಳೆಯರನ್ನು ಮದುವೆಯಾಗುವುದಾಗಿ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ಮೂಲಕ ನಂಬಿಸುತ್ತಿದ್ದ. ತಾನು ಸರ್ಕಾರಿ ನೌಕರ ಅಥವಾ ಎಂಜಿನಿಯರ್ ಎಂದು ಹೇಳುತ್ತಿದ್ದ. ಅನೇಕ ಮಹಿಳೆಯರಿಗೆ ತಾನು ಅವರನ್ನು ಮದುವೆಯಾಗುವುದಾಗಿ ನಂಬಿಸಿದ್ದ.
ಹೀಗೆ ರಾಜ್ಯಾದ್ಯಂತ ಸುಮಾರು 100 ಮಹಿಳೆಯರನ್ನು ವಂಚಿಸಿ ಅವರಿಂದ ಸದಿತ್ ಖಾನ್ ಹಣ ಕಿತ್ತುಕೊಂಡಿದ್ದಾನೆ ಎಂದು ಈಶಾನ್ಯ ವಲಯದ ಡಿಸಿಪಿ ಹರ್ಷ ಪಿ.ಎಸ್ ತಿಳಿಸಿದ್ದಾರೆ. ಇವರಲ್ಲಿ ಎಲ್ಲಾ ಮಹಿಳೆಯರು ದೂರು ನೀಡಿಲ್ಲ. ಕೆಲವರು ಮಾತ್ರ ಈತನ ವಿರುದ್ಧ ಕೆ.ಆರ್.ಪುರಂ, ಜಯನಗರ, ವಿದ್ಯಾರಣ್ಯಪುರ, ಹೆಬ್ಬಗೋಡಿ, ದೊಡ್ಡಬಳ್ಳಾಪುರ ಮತ್ತು ಧಾರವಾಡ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದಾರೆ.
ಖಾಸಗಿ ಕಾಲೇಜಿನ ಉಪನ್ಯಾಸಕಿ ಬಗಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಖಾನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಪನ್ಯಾಸಕಿಗೆ ಸದಿತ್ ಖಾನ್ ಮ್ಯಾಟ್ರಿಮೊನಿಯಲ್ ಮೂಲಕ ಪರಿಚಯವಾಗಿದ್ದಾರೆ. ಆತ ಕೇಂದ್ರ ಸರ್ಕಾರಿ ಉದ್ಯೋಗದಲ್ಲಿರುವುದಾಗಿ ನಂಬಿಸಿದ್ದ ಎನ್ನುತ್ತಾರೆ. ಹಲವು ದಿನಗಳವರೆಗೆ ಸುತ್ತಾಡಿದ ನಂತರ ಕಾಲೇಜಿಗೆ ಹೋಗಿ 50,000 ರೂಪಾಯಿ ಉಪನ್ಯಾಸಕಿ ಬಳಿಯಿಂದ ತೆಗೆದುಕೊಂಡಿದ್ದಾನೆ. ನಂತರ ಸ್ವಲ್ಪ ದಿನ ಕಳೆದ ನಂತರ ಸದಿತ್ ಮೈಸೂರಿನಲ್ಲಿ ಮತ್ತೊಬ್ಬ ಮಹಿಳೆಗೆ ವಂಚಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ ಎಂದು ತಿಳಿದುಬಂತು. 
2011ರಲ್ಲಿ ಬೆಂಗಳೂರಿಗೆ ಬಂದಿದ್ದ ಖಾನ್ ವೆಲ್ಡಿಂಗ್ ಶಾಪ್ ವೊಂದರಲ್ಲಿ ಯಶವಂತಪುರದಲ್ಲಿ ಕೆಲಸ ಮಾಡುತ್ತಿದ್ದ. ನಂತರ ಹಲವು ಬಿಪಿಒಗಳಲ್ಲಿ ಕೆಲಸ ಮಾಡಿ ಅಲ್ಲಿ ಮಹಳೆಯರ ಜೊತೆ ಅನುಚಿತವಾಗಿ ವರ್ತಿಸಿ ಕೆಲಸದಿಂದ ಹೊರಹಾಕಲ್ಪಟ್ಟಿದ್ದ. ನಂತರ ನಿರುದ್ಯೋಗಿಯಾದ, ಅನೇಕ ಮ್ಯಾಟ್ರಿಮೊನಿಯಲ್ ಸೈಟ್ ಗಳಲ್ಲಿ ದಾಖಲಾತಿ ಮಾಡಿಕೊಂಡ. ಈ ಮಧ್ಯೆ ಅನೇಕ ಮಹಿಳೆಯರ ಜೊತೆ ಸುತ್ತಾಡಿ ಅವರಿಂದ ಹಣ ಕೀಳುತ್ತಿದ್ದ,  ಮ ಮೋಜು ಜೀವನ ನಡೆಸುತ್ತಿದ್ದ. ಮೈಸೂರು, ಧಾರವಾಡ, ಬೆಂಗಳೂರು ಮತ್ತು ದೊಡ್ಡಬಳ್ಳಾಪುರಗಳಲ್ಲಿನ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದ. 
ಭಾರತೀಯ ದಂಡಸಂಹಿತೆಯ ಸೆಕ್ಷನ್ 341, 354, 392, 384, 420, 506 ಅಡಿ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!