ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಬಿಎಂಟಿಸಿಯ ಫೀಡರ್ ಬಸ್ ಸೇವೆಗೆ ನಷ್ಟ ಉಂಟಾಗುತ್ತಿದ್ದು, ಬಿಎಂಟಿಸಿ ಫೀಡರ್ ಬಸ್ ಗಳನ್ನು ಬಿಎಂಆರ್ ಸಿಎಲ್ ಗೇ ಗುತ್ತಿಗೆ ನೀಡಲು ಚಿಂತನೆ ನಡೆಸಿದೆ.
ಫೀಡರ್ ಬಸ್ ಗಳ ಸೇವೆಯಿಂದಾಗಿ ಉಂಟಾಗುತ್ತಿರುವ ನಷ್ಟ 18 ಕೋಟಿಯಷ್ಟಿದ್ದು, ಇದು ಹೀಗೇ ಮುಂದುವರೆದರೆ ಬಸ್ ಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ. ಕ್ಯಾಬ್ ಸೇವೆ ಹಾಗೂ ಖಾಸಗಿ ವಾಹನಗಳಿಂದ ಫೀಡರ್ ಬಸ್ ಸೇವೆಯನ್ನು ಬಳಕೆ ಮಾಡುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಯಲ್ಲಿ ಫೀಡರ್ ಬಸ್ ಗಳ ಸೌಲಭ್ಯ ಸಿಗುವ ಸಮಯ, ಸಂಖ್ಯೆಯಲ್ಲೂ ವ್ಯತ್ಯಯವಾಗಿದ್ದು, ಪ್ರಯಾಣಿಕರಿಗೂ ಸಮಸ್ಯೆ ಉಂಟಲಗುತ್ತಿದೆ. ಈ ಹಿನ್ನೆಲೆಯಲ್ಲಿ ಫೀಡರ್ ಬಸ್ ಸೇವೆಗಳನ್ನು ಬಿಎಂಆರ್ ಸಿಎಲ್ ಗೇ ಗುತ್ತಿಗೆಗೆ ನೀಡಲು ಬಿಎಂಟಿಸಿ ನಿರ್ಧರಿಸಿದೆ.
ನವದೆಹಲಿಯಲ್ಲೂ ಇದೇ ಮಾದರಿಯ ವ್ಯವಸ್ಥೆ ಇದ್ದು, ಅಲ್ಲಿನ ಸ್ಥಳೀಯ ಬಸ್ ಸೇವೆಗಳ ಸಂಸ್ಥೆ ಫೀಡರ್ ಬಸ್ ಗಳನ್ನು ಡಿಎಂಆರ್ ಸಿ ಗೆ ಗುತ್ತಿಗೆ ನೀಡಿದೆ. ಬಸ್ ಗಳನ್ನು ನಿಲ್ಲಿಸುವುದಕ್ಕೆ ಸ್ಥಳ ಕಡಿಮೆ ಇರುವುದು ಹಾಗೂ ಫೀಡರ್ ಬಸ್ ಗಳ ನಿರ್ವಹಣೆಗೆ ಹೆಚ್ಚಿನ ಹೊರೆ ಬೀಳುವುದರಿಂದ ಬಿಎಂಆರ್ ಸಿಎಲ್ ಸಹ ಫೀಡರ್ ಬಸ್ ಸೇವೆಗಳನ್ನು ಗುತ್ತಿಗೆಗೆ ಪಡೆಯಲು ಹಿಂದೇಟು ಹಾಕುತ್ತಿದೆ.
ಒಂದು ವೇಳೆ ಬಿಎಂ ಆರ್ ಸಿಎಲ್ ಬಸ್ ಸೇವೆಗಳನ್ನು ಗುತ್ತಿಗೆ ಪಡೆದರೆ ಮೆಟ್ರೋ ಮಾರ್ಗಗಳಿಗೆ ಅನುಗುಣವಾಗಿ ಬಸ್ ಸೇವೆಗಳನ್ನು ಪ್ರಾರಂಭಿಸುವ ಸ್ವಾತಂತ್ರ್ಯ ಬಿಎಂಆರ್ ಸಿಎಲ್ ಗೆ ಸಿಗಲಿದೆ. ಅಷ್ಟೇ ಅಲ್ಲದೇ ಫೀಡರ್ ಬಸ್ ಗಳಲ್ಲಿ ಮೆಟ್ರೋ ಸ್ಮಾರ್ಟ್ ಕಾರ್ಡ್ ನ್ನೇ ಬಳಕೆ ಮಾಡುವ ಉದ್ದೇಶವೂ ಇದ್ದು ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics