ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್
ಬೆಂಗಳೂರು: ಸಂಘ ಪರಿವಾರದ ಸಂಪರ್ಕದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಪಕ್ಷದ ಕಾರ್ಯಕರ್ತರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಗುರುವಾರ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ವಿದ್ಯಾರ್ಥಿ ಸಂಘಟನೆ ಎನ್ಎಸ್'ಯುಐ ಹಾಗೂ ಇತರೆ ವಿದ್ಯಾರ್ಥಿ ಸಂಘಟನೆಗಳ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿರುವ ವೇಣುಗೋಪಾಲ್ ಅವರು, ಸಭೆಯಲ್ಲಿ ಆರ್'ಎಸ್ಎಸ್, ಎಬಿವಿಪಿ ಪರ ಇರುವ ಕಾಲೇಜುಗಳ ಮಾಹಿತಿಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಸಭೆಯಲ್ಲಿ ಕೆಲ ಕಾಂಗ್ರೆಸ್ ಸದಸ್ಯರು ಆರ್'ಎಸ್ಎಸ್, ಎಬಿವಿಪಿ ಪರ ಇರುವ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ನಮಗೆ ಅಂತರ ಕಾಲೇಜುಗಳ ಆವರಣ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಕಾಲೇಜುಗಳು ಪ್ರಾಂಶುಪಾಲರು ಆರ್'ಎಸ್ಎಸ್ ಹಾಗೂ ಎಬಿವಿಪಿ ಪರ ಇದ್ದಾರೆ, ಅಂತರ ಕಾಲೇಜುಗಳನ್ನು ಯುವ ಕಾಂಗ್ರೆಸ್ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ವಿರ್ದಾರ್ಥಿ ಸಂಘಟನೆಗಳು ನಡೆಸುವ ಕಾರ್ಯಕ್ರಮಗಳು, ಹೋರಾಟಕ್ಕೆ ಕಾಲೇಜುಗಳು ಯಾವುದೇ ರೀತಿಯ ಬೆಂಬಲ ನೀಡದ ಕಾರಣ ಸಂಘಟನೆಗೆ ಕಷ್ಟವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಈ ವೇಳೆ ಮಾತನಾಡಿದ ವೇಣುಗೋಪಾಲ್ ಅವರು, ಆರ್'ಎಸ್ಎಸ್, ಎಬಿವಿಪಿ ಪರ ಇರುವ ಕಾಲೇಜುಗಳ ಪಟ್ಟಿಯನ್ನು ನೀಡುವಂತೆ ಕೇಳಿದ್ದಾರೆಂದು ತಿಳಿದುಬಂದಿದೆ.
ವೇಣುಗೋಪಾಲ್ ಅವರ ಈ ಹೇಳಿಕೆಗೆ ಇದೀಗ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ. ವೇಣುಗೋಪಾಲ್ ಅವರು ಎಬಿವಿಪಿ ಮತ್ತು ಸಂಘ ಪರಿವಾರದ ಸಂಪರ್ಕದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ವಿರುದ್ಧ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ. ಆರ್'ಎಸ್ಎಸ್ ಬೆಂಬಲಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ನಡೆಯು ಪ್ರಜಾತಾಂತ್ರಿಕ ವ್ಯವಸ್ಥೆಯ ಕುರಿತು ಮತ್ತು ಸಂವಿಧಾನ ಆಶಯಗಳ ಬಗ್ಗೆ ಇರುವ ಅಗೌರವವನ್ನು ಸೂಚಿಸುತ್ತೆದ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ ಬಿದರೆಯವರು ಹೇಳಿದ್ದಾರೆ.
ಎಎಸ್'ಯುಐ ರಾಜ್ಯ ಅಧ್ಯಕ್ಷ ಮಂಜುನಾಥ್ ಗೌಡ ಅವರು ಮಾತನಾಡಿ, ವೇಣುಗೋಪಾಲ್ ಅವರ ಇಂತಹ ಯಾವುದೇ ಪಟ್ಟಿಯನ್ನು ಕೇಳಿಲ್ಲ ಎಂದು ಹೇಳಿದ್ದಾರೆ.
ವೇಣುಗೋಪಾಲ್ ಅವರು ಕಾಂಗ್ರೆಸ್ ನಲ್ಲಿದ್ದು, ಕಮ್ಯುನಿಸ್ಟ್ ಸಿದ್ಧಾಂತಗಳ ಪ್ರಭಾವಕ್ಕೊಳಗಾಗಿದ್ದಾರೆ. ನಮ್ಮ ಕಾಲೇಜು ಕ್ಯಾಂಪಸ್ ಗಳಲ್ಲಿ ಅಂತಹ ಸಿದ್ಧಾಂತಗಳನ್ನು ಹೇರಲು ಸಾಧ್ಯವಿಲ್ಲ. ಸಂಘ ಪರಿವಾರಕ್ಕೆ ಬೆಂಬಲವಾಗಿರುವ ಪ್ರಾಂಶುಪಾಲರ ಬಗ್ಗೆ ಮಾಹಿತಿ ಬೇಕೆಂದಿದ್ದರೆ, ರಾಜ್ಯ ಎಬಿವಿಪಿ ಕಚೇರಿಗೆ ಬರಲಿ ನಾವೇ ಅವರಿಗೆ ಮಾಹಿತಿಯನ್ನು ನೀಡುತ್ತೇವೆ. ಅವರಿಗೆ ಬೆಂಬಲ ನೀಡುವ ವಿದ್ಯಾರ್ಥಿಗಳನ್ನು ಹಾಗೂ ಕಾರ್ಯಕರ್ತರನ್ನು ಕರೆದುಕೊಂಡು ಹೋಗಲಿ. ಆದರೆ, ನಮ್ಮ ಸಂಘಟನೆಗೆ ಬೆಂಬಲ ನೀಡುವವರಿಗೆ ತೊಂದರೆ ಸುಮ್ಮನಿರುವುದಿಲ್ಲ ಎಂದಿದ್ದಾರೆ.
ಸ್ವತಃ ವೇಣುಗೋಪಾಲ್ ಅವರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೆಲ ಶಿಕ್ಷಕರು ಬೋದಿಸುವ ವೇಳೆ ಆರ್'ಎಸ್ಎಸ್ ಹಾಗೂ ಎಬಿವಿಪಿ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ರಾಜಕೀಯವನ್ನು ಮಿಶ್ರಣ ಮಾಡಿ ಮಾತನಾಡುತ್ತಿದ್ದಾರೆಂದು ದೂರುಗಳು ಬಂದಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಜಕೀಯವನ್ನು ಸೇರ್ಪಡೆಗೊಳಿಸುವುದು ಕಾನೂನಿಗೆ ವಿರುದ್ಧವಾದದ್ದು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಬೇಕು. ಹೀಗಾಗಿ ನಾನು ವರದಿಯನ್ನು ಕೇಳಿದ್ದೇನೆಂದು ಹೇಳಿದ್ದಾರೆ.