ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 36 ಸಾವಿರ ರು. ಗಾಗಿ ಮಹಿಳೆಗೆ 20 ಬಾರಿ ಇರಿದ ವ್ಯಕ್ತಿ

36 ಸಾವಿರ ರೂ. ಹಣಕ್ಕಾಗಿ 20 ವರ್ಷದ ವ್ಯಕ್ತಿಯೊಬ್ಬ ಮಹಿಳೆಗೆ 20 ಬಾರಿ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

ಬೆಂಗಳೂರು: 36 ಸಾವಿರ ರೂ. ಹಣಕ್ಕಾಗಿ 20 ವರ್ಷದ ವ್ಯಕ್ತಿಯೊಬ್ಬ ಮಹಿಳೆಗೆ 20 ಬಾರಿ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆ ಸಂಬಂಧ ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ವೆಂಕಟೇಶ್ ಕೆಲಸ ಮಾಡುತ್ತಿದ್ದ.ಅದೇ ಬ್ಯಾಂಕ್ ನಲ್ಲಿ ಮೃತ ಯುವತಿ ಕಾವ್ಯಾ ಕೂಡ ಕೆಲಸ ಮಾಡುತ್ತಿದ್ದಳು.
ಕಳೆದ ತಿಂಗಳು ಕಾವ್ಯಾ ಕೆಲಸ ಬಿಟ್ಟು ಕುಂಬಳಗೂಡಿನ ತಾಯಿಯ ಮನೆಯಲ್ಲಿದ್ದಳು. 85 ಸಾವಿರ ರು.ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಮೂರು ತಿಂಗಳ ಹಿಂದೆ ವೆಂಕಟೇಶ್ ನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. 2 ತಿಂಗಳಲ್ಲಿ ಹಣ ವಾಪಸ್ ನೀಡದಿದ್ದರೇ ಪೊಲೀಸ್ ಕೇಸ್ ದಾಖಲಿಸುವುದಾಗಿ ಬ್ಯಾಂಕ್ ಆಡಳಿತ ಮಂಡಳಿ ಎಚ್ಚರಿಕೆ ನೀಡಿತ್ತು. 45 ಸಾವಿರ ರು ಹಣವನ್ನು ವೆಂಕಟೇಶ್ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಕಾವ್ಯಾ ಬಾಯ್ ಫ್ರೆಂಡ್ ಪುನೀತ್ ಆಕೆಯ ತಾಯಿ ಮನೆಯಲ್ಲಿಲ್ಲದ ವೇಳೆ ಮನೆಗೆ ತೆರಳಿ 36 ಸಾವಿರ ರು. ಹಣ ನೀಡಿದ್ದ. ಉಬರ್ ಕ್ಯಾಬ್ ಡ್ರೈವರ್ ಆಗಿದ್ದ ಪುನೀತ್ ಕಾವ್ಯಾಳಿಂದ ಈ ಮೊದಲು ಸಾಲ ಪಡೆದಿದ್ದ. ಈತ ವೆಂಕಟೇಶ್ ಗೂ ಕೂಡ ಸ್ನೇಹಿತ ಆಗಿದ್ದ. ಪುನೀತ್ ಕಾವ್ಯಾಗೆ ಹಣ ನೀಡಿದ ವಿಷಯ ವೆಂಕಟೇಶ್ ಗೆ ತಿಳಿದಿತ್ತು.
ರಾತ್ರಿ ಸುಮಾರು 9.30ರ ವೇಳೆಗೆ ಕಾವ್ಯಾ ಮನೆಗೆ ತೆರಳಿದ ವೆಂಕಟೇಶ್, ಸುಮಾರು 20-25 ಬಾರಿ ಚೂರಿಯಿಂದ ಇರಿದು 36 ಸಾವಿರ ರು ಹಣವನ್ನು ಕದ್ದು ಹೋಗಿದ್ದಾನೆ, ನಂತರ ರಕ್ತದ ಕಲೆ ಮೆತ್ತಿಕೊಂಡಿದ್ದ ಆತನ ಬಟ್ಟೆ ಮತ್ತು ಕೊಲೆ ಮಾಡಲು ಬಳಸಿದ್ದ ಆಯುಧವನ್ನು ದೂರದ ಪ್ರದೇಶದಲ್ಲಿ ಎಸೆದು ಬಂದಿದ್ದ. ಮನೆಗೆ ಬಂದ ಕಾವ್ಯಾ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!