ರವಿಬೆಳಗೆರೆ ಮತ್ತು ಕೆ.ಬಿ ಕೋಳಿವಾಡ್ 
ರಾಜ್ಯ

ಮಾಧ್ಯಮ V/S ಶಾಸಕಾಂಗ: ಸಮಸ್ಯೆ ಬಗೆಹರಿಸಲು ಬೇರೆ ದಾರಿ ಇದೆಯೇ- ಹೈಕೋರ್ಟ್ ಪ್ರಶ್ನೆ

ರ್ನಾಟಕ ವಿಧಾನಸಭೆಯಿಂದ ಶಿಕ್ಷೆಗೊಳಗಾಗಿರುವ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್‌ ರಾಜ್‌ಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಪುನಃ ವಿಚಾರಣೆ ನಡೆಸಿ ...

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ಶಿಕ್ಷೆಗೊಳಗಾಗಿರುವ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್‌ ರಾಜ್‌ಗೆ  ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಪುನಃ ವಿಚಾರಣೆ ನಡೆಸಿ ಪರಿಹಾರ ಹುಡುಕಲು ಸಾಧ್ಯವೇ ಹೇಗೆ ಎಂಬುದನ್ನು ಪರಿಶೀಲಿಸಿ ಮಾಹಿತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಹಕ್ಕುಬಾಧ್ಯತೆಗಳ ಸಮಿತಿ ವಿಧಿಸಿರುವ ಒಂದು ವರ್ಷದ ಜೈಲು ಶಿಕ್ಷೆ ಮತ್ತು ರು 10 ಸಾವಿರ ದಂಡದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಪತ್ರಕರ್ತ ರವಿ ಬೆಳಗೆರೆ ಹಾಗೂ ಅನಿಲ್‌ ರಾಜ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ  ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ ಅವರಿಗೆ ಸೂಚಿಸಿದೆ. 
ರವಿ ಬೆಳಗೆರೆ ಮತ್ತು ಅನಿಲ್‌ ರಾಜ್‌  ಕ್ಷಮೆ ಯಾಚಿಸಿದರೆ ನಿರ್ಣಯ ಬದಲಿಸಲು ಸಾಧ್ಯವೇ,  ಶಿಕ್ಷೆ ಮರು ಪರಿಶೀಲಿಸಲು ವಿಧಾನಸಭಾಧ್ಯಕ್ಷರು ತಮಗಿರುವ ಅಂತರ್ಗತ ಅಧಿಕಾರವನ್ನು ಬಳಸಬಹುದೇ, ವಿಧಾನಸಭಾಧ್ಯಕ್ಷರು ಅರ್ಜಿದಾರರನ್ನು ಕರೆಯಿಸಿಕೊಂಡು ಅವರಿಂದ ಸೂಕ್ತ ಸಮಜಾಯಿಷಿ ಪಡೆಯಲು ಅವಕಾಶ ಇದೆಯೇ  ಕಾನೂನಿನ ಯಾವ ಚೌಕಟ್ಟಿನಲ್ಲಿ ನೀವು ಈ ಶಿಕ್ಷೆ ವಿಧಿಸಿದ್ದೀರಿ. ಇದಕ್ಕೆ  ನಿರ್ದಿಷ್ಟ ಮಾರ್ಗದರ್ಶಿ ಸೂತ್ರ  ಇವೆಯೇ , ಪ್ರಕರಣವನ್ನು ರಿಓಪನ್ ಮಾಡಿ, ಪುನರ್ ಪರಿಶೀಲನೆ ಮಾಡಲು ಸಾಧ್ಯವಿದೆಯೆ ಎಂದು, ನ್ಯಾಯಮೂರ್ತಿ ಹಿಂಚಗೇರಿ , ಪೊನ್ನಣ್ಣ ಅವರಿಗೆ ಕೇಳಿದ್ದಾರೆ. ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದೆ.
ಒಬ್ಬ ಪತ್ರಕರ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ, ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾರೆ. ಹೀಗಿರುವಾಗ ಅವರು ಬಿಡುಗಡೆಗೆ  ಅರ್ಹರಾಗಿಲ್ಲ ಎಂದು ಪೊನ್ನಣ್ಣ ವಾದಿಸಿದ್ದಾರೆ.
ಅರ್ಜಿದಾರರ ಪರ ವಕೀಲ, ಹಕ್ಕು ಬಾಧ್ಯತಾ ಸಮಿತಿ ನೀಡಿರುವ ಆದೇಶದ ಪ್ರತಿಯನ್ನು ನಮಗೆ ನೀಡಿಲ್ಲ, ಖುದ್ದಾಗಿ ತಾವೇ ಹೋಗಿ ಕೇಳಿದರು ಆದೇಶದ ಪ್ರತಿಯನ್ನು ನೀಡಿಲ್ಲ ಎಂದು ಹೇಳಿದರು. 
ಹಕ್ಕು ಬಾಧ್ಯತಾ ಸಮಿತಿಯು ಆದೇಶದ ದೃಢೀಕೃತ ನಕಲು ಪ್ರತಿಯನ್ನು ಅರ್ಜಿದಾರರಿಗೆ ಎರಡು ವಾರಗಳಲ್ಲಿ ನೀಡಬೇಕು ಎಂದೂ ನ್ಯಾಯಪೀಠವು ವಿಧಾನಸಭಾಧ್ಯಕ್ಷರಿಗೆ ನಿರ್ದೇಶಿಸಿದೆ. 
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತ ರವಿ ಬೆಳಗೆರೆ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್