ರಾಜ್ಯ

ಪತ್ರಕರ್ತರ ಸಂಬಂಧಿಕರಿಗೆ ಕಿರುಕುಳ: ಪೊಲೀಸರಿಗೆ ಹೈ ಕೋರ್ಟ್ ತಪರಾಕಿ

Shilpa D
ಬೆಂಗಳೂರು: ಶಾಸನ ಸಭೆಯಿಂದ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲಾ ರಾಜ್ ಅವರ ಸಂಬಂಧಿಕರಿಗೆ ಪೊಲೀಸರು ಕಿರುಕುಳ  ನೀಡಿದ್ದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.
ಏನಾಗುತ್ತಿದೆ? ನಾವು ಪ್ರಜಾ ಪ್ರಭುತ್ವದಲ್ಲಿ ಜೀವಿಸುತ್ತಿದ್ದೇವೆಯೇ? ಪೊಲೀಸರ ನಡವಳಿಕೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮೋಹನ್ ಕುಮಾರ್ ಅವರನ್ನು ಹಾಜರು ಪಡಿಸಲಿಲ್ಲ ಯಾಕೆ? ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುವ ಅವಶ್ಯಕತೆ ಏನಿತ್ತು? ಈ ರೀತಿಯ ಘಟನೆ ಸಂಭವಿಸಬಾರದು, ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಗೇರಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪತ್ರಕರ್ತ ಅನಿಲ್ ರಾಜ್ ಅವರ ಹಿರಿಯ ಸಹೋದರನ ಅಳಿಯ ಮೋಹನ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬಆರೋಪ ಸಂಬಂಧ ನ್ಯಾಯಮೂರ್ತಿಗಳು ಕಿಡಿಕಾರಿದ್ದಾರೆ.
ಪತ್ರಕರ್ತರ ಸಂಬಂಧಿಕರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಹಾಗೂ ಅವರಿಗೆ ಕಿರುಕುಳ ನೀಡದಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ ಅವರಿಗೆ ನ್ಯಾಯಮೂರ್ತಿಗಳು  ಸೂಚಿಸಿದ್ದಾರೆ.
ರವಿ ಬೆಳಗೆರೆ ಪುತ್ರ ಕರ್ಣ ಬೆಳಗೆರೆ ವಿರುದ್ಧ ಹುಬ್ಬಳ್ಳಿ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿ, ನಂತರ ಜಾಮೀನಿನ ಮೇಲೆ ಬಿಡುಡೆ ಮಾಡಲಾಗಿತ್ತು. ಪತ್ರಕರ್ತರ ಪರ ವಕೀಲರಾದ ಶಂಕರಪ್ಪ ಇದನ್ನು ಪ್ರಶ್ನಿಸಿದ್ದರು, 
ಹೈಕೋರ್ಟ್ ಅಸಮಾಧಾನ ಹೊರ ಹಾಕಿದ ನಂತರ, ಪೊಲೀಸರು ಮೋಹನ್ ಕುಮಾರ್ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನಂತರ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 
SCROLL FOR NEXT