ಸಾಂದರ್ಭಿಕ ಚಿತ್ರ 
ರಾಜ್ಯ

'ಪ್ರತಿಬಿಂಬ-ಮುಖ್ಯಮಂತ್ರಿಯವರ ಮಾಹಿತಿಕೋಶ' ಬಿಡುಗಡೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 4 ವರ್ಷಗಳಲ್ಲಿ ಮಾಡಿರುವ ಆಡಳಿತ...

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 4 ವರ್ಷಗಳಲ್ಲಿ ಮಾಡಿರುವ ಆಡಳಿತ, ಸಾಧನೆಗಳನ್ನು ಜನತೆ ಮುಂದಿಡುವ ಪ್ರತಿಬಿಂಬ-ಮುಖ್ಯಮಂತ್ರಿಯವರ ಮಾಹಿತಿಕೋಶ ಮಂಗಳವಾರ ಲೋಕಾರ್ಪಣೆಗೊಂಡಿದೆ.
ರಾಜ್ಯದ ಜನತೆಗೆ ಚುನಾವಣೆ ವೇಳೆ ನೀಡಿದ್ದ ಭರವಸೆಗಳೇನು, ಚುನಾವಣಾ ಪ್ರಣಾಳಿಕೆ ನೀಡಿದ್ದ ಆಶಾಸ್ವನೆಗಳು, ಮಾಡಿರುವ ಸಾಧನೆಗಳನ್ನು ರಾಜ್ಯದ ಜನರ ಮುಂದೆ ಇಡುವ ಪ್ರಯತ್ನವಾಗಿ ಪ್ರತಿಬಿಂಬ – ಮುಖ್ಯಮಂತ್ರಿಯವರ ಮಾಹಿತಿಕೋಶ ಬಿಡುಗಡೆಯಾಗಿದೆ.
ಅಂತರ್ಜಾಲ ಅಧರಿತ ಈ ಮಾಹಿತಿಕೋಶವು ಎಲ್ಲರಿಗೂ ಮುಕ್ತವಾಗಿ ಲಭ್ಯವಿರಲಿದೆ. 
ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ತರುವ ನಿಟ್ಟಿನಲ್ಲಿ ಪ್ರತಿಬಿಂಬ ಮಾಹಿತಿಕೋಶವು ಮಹತ್ವದ ಹೆಜ್ಜೆಯಾಗಿದೆ. ಚುನಾವಣಾ ಪ್ರಣಾಳಿಕೆ ವೇಳೆ ನಾವು ನೀಡಿದ್ದ 165 ಆಶ್ವಾಸನೆಗಳಲ್ಲಿ 125 ಆಶ್ವಾಸನೆಗಳನ್ನು ಈ ನಾಲ್ಕು ವರ್ಷದ ಅವಧಿಯಲ್ಲಿ ಈಡೇರಿಸಿದ್ದೇವೆ. ಉಳಿದ ಆಶ್ವಾಸನೆಗಳನ್ನು ಮುಂದಿನ ಒಂದು ವರ್ಷದ ಅವಧಿಯಲ್ಲಿ ಈಡೇರಿಸಲಿದ್ದೇವೆ. ಜನ ಮತದಾನದ ಮೂಲಕ ನಮಗೆ ಅಧಿಕಾರವನ್ನು ನೀಡಿದ ಮೇಲೆ ಅವರಿಗೆ ಉತ್ತರದಾಯಿಗಳಾಗಿರಬೇಕಾದುದು ನಮ್ಮ ಕರ್ತವ್ಯ. ಜನರ ನಿರೀಕ್ಷೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ನಾವು ನಡೆಸುತ್ತಿರುವ ಆಡಳಿತದ ಬಗ್ಗೆ ತಿಳಿಯುವ ಅಧಿಕಾರ ಜನರಿಗೆ ಇರುತ್ತದೆ. ಈ ಎಲ್ಲ ಆಶಯಗಳನ್ನು ಪ್ರತಿಬಿಂಬ ಮಾಹಿತಿಕೋಶವು ಈಡೇರಿಸಲಿದೆ ಎಂದು ಮುಖ್ಯಮಂತ್ರಿ ಮಾಹಿತಿ ಕೋಶವನ್ನು ಬಿಡುಗಡೆ ಮಾಡಿ ಹೇಳಿದ್ದಾರೆ.
ಈ ಮಾಹಿತಿಕೋಶದಲ್ಲಿ ಸಚಿವರು, ಸಚಿವಾಲಯದ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ತಮ್ಮ ಬೆರಳ ತುದಿಯಲ್ಲಿ ಇಲಾಖಾವಾರು ಮಾಹಿತಿಗಳನ್ನು ಪಡೆಯಬಹುದಾಗಿದೆ. ಸರ್ಕಾರದ ಪ್ರಮುಖ ಕಾರ್ಯಕ್ರಮಗಳು, ಇಲಾಖಾವಾರು ಇರಿಸಿಕೊಂಡಿದ್ದ ಗುರಿಗಳು, ಇವೆಲ್ಲವಕ್ಕೂ ನೀಡಲಾದ ಅನುದಾನ, ಅದರ ಬಳಕೆ, ಗುರಿ ಈಡೇರಿಕೆಯಲ್ಲಿ ಮಾಡಲಾದ ಸಾಧನೆಗಳು ಇದೆಲ್ಲವೂ ಲಭ್ಯವಿರಲಿದೆ, ಅಲ್ಲದೆ ಪ್ರತಿ ತಿಂಗಳ ಹತ್ತರಂದು ಇಲಾಖಾವಾರು ಮಾಹಿತಿಗಳನ್ನು ಪರಿಷ್ಕರಿಸಲಾಗುತ್ತದೆ. ಮಾಸಿಕ, ತ್ರೈಮಾಸಿಕ, ವಾರ್ಷಿಕ ಸಾಧನೆಯ ಮಾಹಿತಿ ಮಾತ್ರವೇ ಅಲ್ಲದೆ ಹಿಂದಿನ ವರ್ಷದ ಹೋಲಿಕೆಯಲ್ಲಿ ತುಲನಾತ್ಮಕವಾಗಿ ಮಾಡಲಾದ ಸಾಧನೆಯೂ ಲಭ್ಯವಿರಲಿದೆ. 
ಪ್ರತಿಬಿಂಬ ಮಾಹಿತಿಕೋಶವನ್ನು ವೀಕ್ಷಿಸಲು ಸಾರ್ವಜನಿಕರು http://pratibimba.karnataka.gov.in/ ಈ ಲಿಂಕ್ ನ್ನು ಹಾಗೂ ಮಾಹಿತಿಕೋಶದ ಕುರಿತಾದ ಮುಖ್ಯಮಂತ್ರಿ ಆಶಯಗಳನ್ನು ತಿಳಿಯಲು https://youtu.be/kBrlt73rBEc ವಿಡಿಯೋವನ್ನು ನೋಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್