ಸಾಂದರ್ಭಿಕ ಚಿತ್ರ 
ರಾಜ್ಯ

ಪುರುಷತ್ವದ ಬಗ್ಗೆ ಟಿವಿ ಚಾನೆಲ್ ನಲ್ಲಿ ಸುದ್ದಿ ಪ್ರಸಾರ: ಮೈಸೂರಿನಲ್ಲಿ ನೀರಿನ ಟ್ಯಾಂಕ್ ಏರಿ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ

ಕೌಟುಂಬಿಕ ಕಲಹದ ಬಗ್ಗೆ ವರದಿ ಮಾಡಿದ ಸ್ಥಳೀಯ ಮಾಧ್ಯಮಗಳು ಪುರುಷತ್ವ ಪ್ರಶ್ನಿಸಿದ ಹಿನ್ನೆಲೆಯಲ್ಲಿ ನೊಂದ ವ್ಯಕ್ತಿಯೊಬ್ಬ ನೀರಿನ ಟ್ಯಾಂಕರ್ ಏರಿ ಆತ್ಮಹತ್ಯೆಗೆ

ಮೈಸೂರು: ಕೌಟುಂಬಿಕ ಕಲಹದ ಬಗ್ಗೆ ವರದಿ ಮಾಡಿದ ಸ್ಥಳೀಯ ಮಾಧ್ಯಮಗಳು  ಪುರುಷತ್ವ ಪ್ರಶ್ನಿಸಿದ ಹಿನ್ನೆಲೆಯಲ್ಲಿ ನೊಂದ ವ್ಯಕ್ತಿಯೊಬ್ಬ ನೀರಿನ ಟ್ಯಾಂಕರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಪೇಂಟರ್ ಕೆಲಸ ಮಾಡುವ ಅರುಣ್ ಕುಮಾರ್ ಎಂಬಾತ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನೀರಿನ ಟ್ಯಾಂಕ್ ಏರಿ ಕುಳಿತಿದ್ದ. ಸುಮಾರು 1 ಗಂಟೆ ಗಳ ಕಾಲ ನಡೆದ ಈ ಹೈಡ್ರಾಮಾಗೆ ಹಲವು ಮಂದಿ ಸಾಕ್ಷಿಯಾದರು.

30 ವರ್ಷದ ಕುಮಾರ್ 10 ವರ್ಶಗಳ ಹಿಂದೆ ವಿವಾಹವಾಗಿದ್ದರು. ಇಬ್ಬರ ನಡುವೆ ಹೊಂದಾಣಿಕೆಯಿಲ್ಲದ ಕಾರಣ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ತನ್ನ ಪತ್ನಿಯನ್ನು ಕುಮಾರ್ ಮನೆಯಿಂದ ಹೊರಗೆ ಹಾಕಿದ್ದ.

ನಂತರ ಈ ವಿಷಯ ಸ್ಥಳೀಯ ಚಾನೆಲ್ ಗಳಲ್ಲಿ ಪ್ರಸಾರವಾಗಿತ್ತು. ಕೌಟುಂಬಿಕ ಕಲಹದ ಬಗ್ಗೆ ವರದಿ ಪ್ರಸಾರ ಮಾಡಿದ ಚಾನೆಲ್ ಗಳು ಆತನನ್ನು ನಂಪುಂಸಕ ಎಂದು ವರದಿ ಮಾಡಿದ್ದವು. ಇದನ್ನು ನೋಡಿದ ಕುಮಾರ್ ಸ್ನೇಹಿತರು ಆತನಿಗೆ ಕರೆ ಮಾಡಿ ಕಿಚಾಯಿಸಿದ್ದರು, ಇದರಿಂದ ತೀವ್ರ ಖಿನ್ನತೆಗೊಳಗಾದ ಅರುಣ್ ಕುಮಾರ್ ನೀರಿನ ಟ್ಯಾಂಕ್ ಏರಿದ್ದ.

1 ಗಂಟೆಯ ನಂತರ ಪೊಲೀಸರು ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸಫಲವಾದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾನು ಮದುವೆಯಾಗಿ 10 ವರ್ಷದಿಂದ ಸಂಸಾರ ಮಾಡಿಕೊಂಡು ಬಂದಿದ್ದೇನೆ. ಈಗ ಹೆಂಡತಿ ಹಾಗೂ ಮಾವ ನೀನು ಪುರುಷನೇ ಅಲ್ಲ ಎಂದು ಆರೋಪಿಸುತ್ತಿದ್ದಾರೆ. ಟಿವಿ ಚಾನೆಲ್‌ನಲ್ಲಿಯೂ ಈ ಬಗ್ಗೆ ಸುದ್ದಿ ಪ್ರಸಾರವಾಗಿದೆ. ಹಾಗಾಗಿ ಈ ವಿಷಯ ಸ್ನೇಹಿತರೆಲ್ಲರಿಗೂ ಗೊತ್ತಾಗಿದೆ. ಅವರೆಲ್ಲರೂ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಮುಂದಾದೆ ಎಂದು ತಮ್ಮ ಅಳಲು ತೋಡಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ