ವಿಜಯನಾಥ್ ಶೆಣೈ 
ರಾಜ್ಯ

ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್‌ ನಿರ್ಮಾತೃ ವಿಜಯನಾಥ ಶೆಣೈ ನಿಧನ

ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್ ನಿರ್ಮಾತೃ ವಿಜಯನಾಥ್ ಶೆಣೈ (83) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಿಜಯನಾಥ್ ಶೆಣೈ ಪತ್ನಿ, ಮಂಜುಳಾ, ...

ಮಣಿಪಾಲ: ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್ ನಿರ್ಮಾತೃ ವಿಜಯನಾಥ್ ಶೆಣೈ (83) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಿಜಯನಾಥ್ ಶೆಣೈ  ಪತ್ನಿ, ಮಂಜುಳಾ, ಪುತ್ರ ಶ್ರೀನಿವಾಸ್ ಮತ್ತು ಪುತ್ರಿ ಅನುರೂಪ ಅವರನ್ನು ಅಗಲಿದ್ದಾರೆ.

ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಉದ್ಯೋಗಿಯಾಗಿದ್ದ ಅವರು ಹಸ್ತ ಶಿಲ್ಪ ಟ್ರಸ್ಟ್ ಆರಂಭಿಸಿದ್ದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ ಟ್ರಸ್ಟ್ ಮೂಲಕ ಮಣಿಪಾಲ್ ಹೆರಿಟೇಜ್ ನಿರ್ಮಾಣ ಮಾಡಿದ್ದರು.

ತಮ್ಮ ಬಿಡುವಿನ ವೇಳೆಯಲ್ಲಿ ಐತಿಹಾಸಿಕ ಪ್ರದೇಶಗಳನ್ನು ವೀಕ್ಷಿಸಿ, ಅಂತಹುದೇ ಮಾದರಿ ಶಿಲಾ ವಿನ್ಯಾಸವನ್ನು ಮಣಿಪಾಲ್ ಶೈಲಿಯಲ್ಲಿ ನಿರ್ಮಾಣ ಮಾಡಿದ್ದರು. ಇದಕ್ಕಾಗಿ 6 ಎಕರೆ ವಿಸ್ತೀರ್ಣದಲ್ಲಿ ಸುಂದರ ಹಾಗೂ ಭವ್ಯವಾದ ಹೆರಿಟೇಜ್‍ನ್ನು ನಿರ್ಮಾಣ ಮಾಡಿದ್ದರು.

ದೇಶದಲ್ಲಿ ಪಾರಂಪರಿಕ ಶೈಲಿಯ ಮನೆಗಳ ವಿನ್ಯಾಸಗಳು ಆಧುನಿಕ ಜಗತ್ತಿನಲ್ಲಿ ಕಣ್ಮರೆಯಾಗುವ ವೇಳೆಯಲ್ಲಿ ದೇಶಿ ಶೈಲಿಯ ಮನೆಗಳ ನಿರ್ಮಾಣ ಮಾಡಿ ಅವುಗಳ ಉಳಿವಿಗೆ ಕಾರಣವಾಗಿದ್ದರು. ವಿಜಯನಾಥ್ ಶೆಣೈ ಅವರ ಪರಿಶ್ರಮದ ಫಲವಾಗಿ ಮಣಿಪಾಲ್ ಹೆರಿಟೇಜ್‍ನಲ್ಲಿ 30 ಕ್ಕೂ ವಿವಿಧ ಬಗೆಯ ವಾಸ್ತು ಶೈಲಿಯನ್ನು ಕಾಣಬಹುದು.

ಕರಾವಳಿ ಹಾಗೂ ಉತ್ತರ ಕರ್ನಾಟಕದ ನೂರಾರು ವರ್ಷ ಹಳೆಯದಾದ ಕಟ್ಟಡಗಳನ್ನು ಹೆರಿಟೇಜ್‌ ವಿಲೇಜ್‌ಗೆ ಹಸ್ತಾಂತರಿಸಿ ಮರುನಿರ್ಮಾಣ ಮಾಡಿದ್ದರು. ಇದಕ್ಕಾಗಿ ಹಲವಾರು ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು. ಅವರ ಅಂತ್ಯಸಂಸ್ಕಾರ ಬೀಡಿನಗುಡ್ಡೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ