ರಾಜ್ಯ

ಬೆಂಗಳೂರು: ಸಣ್ಣ ನೀರಾವರಿ ಇಲಾಖೆ ಅಸಿಸ್ಟೆಂಟ್ ಎಂಜಿನೀಯರ್ ಬ್ರಹ್ಮಾಂಡ ಭ್ರಷ್ಟಾಚಾರ

Shilpa D

ಬೆಂಗಳೂರು: ತುಮಕೂರು ಜಿಲ್ಲೆ, ಪಾವಘಡ ತಾಲೂಕು ಶಿರಾ ಉಪವಿಭಾಗದ ಸಣ್ಣ ನೀರಾವರಿ ಇಲಾಖೆ  ಅಸಿಸ್ಟೆಂಟ್ ಎಂಜಿನೀಯರ್  ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಭಾರಿ ಪ್ರಮಾಣದ ಆಸ್ತಿ -ಪಾಸ್ತಿ ಪತ್ತೆಯಾಗಿದೆ.

ಅಸಿಸ್ಟೆಂಟ್ ಎಂಜಿನೀಯರ್  ಶ್ರೀಹರಿ ಎಂಬುವರ ಬಳಿ 87 ಎಕರೆ ಕೃಷಿ ಭೂಮಿ, 11 ಲಕ್ಷ ಮೌಲ್ಯದ ಶೇರು ಮತ್ತು ಬಾಂಡ್, 5.5 ಲಕ್ಷ ನಗದು, ಮೂರು ಕಾರು, ಬೇನಾಮಿ  ನಿವೇಶನ ಹಾಗೂ ಕಟ್ಟಡಗಳಿರುವುದು ಪತ್ತೆಯಾಗಿದೆ.

87 ಎಕರೆ ಭೂಮಿ ಮೌಲ್ಯ 50 ಲಕ್ಷ ಇದ್ದು, ಈ ಜಮೀನು ಶ್ರೀಹರಿ ಅವರ ಅತ್ತೆ ಮತ್ತು ಮಾವ ಅವರ ಹೆಸರಿನಲ್ಲಿದೆ, ಪಾವಘಡದಲ್ಲಿರುವ 4 ನಿವೇಶನ, ತಿಪಟೂರು ಮತ್ತು ಬೆಂಗಳೂರಿನ ದಾಸನಪುರದಲ್ಲಿರುವ ನಿವೇಶನಗಳು ಪತ್ನಿ ಹಾಗೂ ತಾಯಿಯ ಹೆಸರಿನಲ್ಲಿವೆ, 11 ಲಕ್ಷ ಮೌಲ್ಯದ ಸಹರಾ ಇಂಡಿಯಾ ಷೇರುಗಳನ್ನು ಖರೀದಿಸಿದ್ದಾರೆ, ನಾಲ್ಕು ಬ್ಯಾಂಕುಗಳಲ್ಲಿ 5.5 ಲಕ್ಷ ಹಣ ಇಟ್ಟಿದ್ದಾರೆ. ಮೂರು ಕಾರು ಹಾಗೂ  ದ್ವಿ ಚಕ್ರ ವಾಹನ ಇದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ, ಇನ್ನೂ ದಾಳಿಯ ಸಮಯದಲ್ಲಿ 250 ಗ್ರಾಂ ಚಿನ್ನ, ಕೂಡ ಸಿಕ್ಕಿದೆ.

ಇನ್ನೂ ಎಸಿಬಿ ಅಧಿಕಾರಿಗಳು ರಾಮನಗರ ಜಿಲ್ಲೆ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ  ಸ್ವಾಮಿ ಎಂಬುವರ ಮನೆ ಮೇಲು ದಾಳಿ ನಡೆಸಿದ್ದಾರೆ. ಚನ್ನಪಟ್ಟಣದಲ್ಲಿ 35 ಲಕ್ಷ ರು ಬೆಲೆ ಬಾಳುವ ಮನೆ ಸ್ವಾಮಿ ಅವರ ಪತ್ನಿಯ ಹೆಸರಲ್ಲಿದೆ. ಎರಡು ನಿವೇಶನ, ಮದ್ದೂರಿನಲ್ಲಿ ಎರಡೂವರೆ ಎಕರೆ ಕೃಷಿ ಭೂಮಿ,  200 ಗ್ರಾಂ ಚಿನ್ನ, ಒಂದೂವರೆ ಕೆಜಿ ಬೆಳ್ಳಿ, ಹ್ಯುಂಡಾಯ್ I20 ಸ್ಪೋರ್ಟ್ಸ್ ಕಾರು 3 ದ್ವಿಚಕ್ರ ವಾಹನ, ವಿವಿಧ ಬ್ಯಾಂಕ್ ಗಳಲ್ಲಿ 20 ಲಕ್ಷ ನಗದು ಪತ್ತೆಯಾಗಿದೆ.

SCROLL FOR NEXT