ರಾಜ್ಯ

ಗಣಧಣಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಹೈಕೋರ್ಟ್ ನಿಂದ ಇ.ಡಿ ದೋಷಾರೋಪ ಪಟ್ಟಿ ರದ್ಧು

Shilpa D

ಬೆಂಗಳೂರು: ಮಾಜಿ ಸಚಿವ ಹಾಗೂ ಗಣಿಧಣಿ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ರದ್ದು ಪಡಿಸಿದೆ.

ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ  ಜನಾರ್ದನ ರೆಡ್ಡಿ ಹಾಗೂ ಅವರ ಒಡೆತನದ ಕಂಪೆನಿಯ 884 ಕೋಟಿ ರು. ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಂಡು ಇದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು  ಸಿಬಿಐ ನ್ಯಾಯಾಲಯದಲ್ಲಿ  ದೋಷಾರೋಪ ಪಟ್ಟಿ ರದ್ಧು ಪಡಿಸಿತ್ತು.

ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಜನಾರ್ದನ ರೆಡ್ಡಿ, ಅವರ ಪತ್ನಿ ಜಿ. ಲಕ್ಷ್ಮಿ ಅರುಣಾ, ಬಳ್ಳಾರಿಯ ಓಬಳಾಪುರಂ ಗಣಿಗಾರಿಕೆ ಕಂಪೆನಿ (ಒಎಂಸಿ) ಹಾಗೂ ಹೊರ ರಾಜ್ಯದಲ್ಲಿರುವ ಬ್ರಹ್ಮಿಣಿ ಇಂಡಸ್ಟ್ರೀಸ್‌ ಪರವಾಗಿ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ  ಮಾನ್ಯ ಮಾಡಿ ಆದೇಶಿಸಿದೆ.

ರೆಡ್ಡಿ ಮತ್ತಿತರರ ವಿರುದ್ಧ ಹಣ ಲೇವಾದೇವಿ–2009ರ ತಿದ್ದುಪಡಿ ಕಾಯ್ದೆ ಅನುಸಾರ ದೋಷಾರೋಪ ಪಟ್ಟಿ ದಾಖಲಿಸಲಾಗಿತ್ತು. ಆದರೆ ರೆಡ್ಡಿ ಮತ್ತಿತರರು 2002 ರಲ್ಲಿ ಅಕ್ರಮ ಎಸಗಿದ್ದಾರೆ. ಹೀಗಾಗಿ 2009ರ ತಿದ್ದು ಪಡಿ ಕಾಯ್ದೆ ಅಡಿ ಈ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ವಿಭಾಗೀಯ ಪೀಠ ತಿಳಿಸಿದೆ.

ಅಪರಾಧಗಳು ಈ ಕಾಯ್ದೆ ತಿದ್ದುಪಡಿಗೂ ಮುನ್ನ ನಡೆದಿವೆ. ಆದ್ದರಿಂದ ಈ ಪ್ರಕರಣದಲ್ಲಿ ತಿದ್ದುಪಡಿ ಕಾಯ್ದೆಯನ್ನು ಪೂರ್ವಾನ್ವಯ ಮಾಡುವುದು ಕಾನೂನು ಬಾಹಿರ ಎಂದು ಆದೇಶದಲ್ಲಿ ತಿಳಿಸಲಾಗಿದೆ.

SCROLL FOR NEXT