ರಾಜ್ಯ

ರಾಮನಗರ: ಊರಿನಲ್ಲಿರಬೇಕಾದರೇ 20 ಸಾವಿರ ನೀಡುವಂತೆ ರೇಪ್ ಸಂತ್ರಸ್ತೆಗ ಖಾಪ್ ಪಂಚಾಯಿತಿ ಆದೇಶ

Shilpa D

ರಾಮನಗರ: ಊರಿನಲ್ಲಿ ಇರಬೇಕಾದರೇ 20 ಸಾವಿರ ರು ಹಣ ನೀಡುವಂತೆ ಅತ್ಯಾಚಾರ ಸಂತ್ರಸ್ತೆಗೆ ಗ್ರಾಮದ ಮುಖಂಡರು ಆದೇಶಿಸಿರುವ ಆಘಾತಕಾರಿ ಘಟನೆ ರಾಮನಗರದಲ್ಲಿ ನಡೆದಿದೆ.

ಸಮಾಜಲ್ಲಿ ಎಲ್ಲರಂತೆ ಸಹಜ ಜೀವನ ನಡೆಸಲು ಅವತಾಶ ನೀಡಬೇಕೆಂದರೇ 20 ರು ನೀಡುವಂತೆ ಮುಖಂಡರು ತಿಳಿಸಿದ್ದಾರೆ.

ಸಂತ್ರಸ್ತೆಗೆ ಸದ್ಯ 18 ವರ್ಷ ವಯಸ್ಸು, ಈಗೆಕೆ ಒಂದು ಗಂಡು ಮಗುವಿದ್ದು, ಆ ಮಗುವನ್ನು ರಾಮನಗರದ ದತ್ತು ಸ್ವೀಕಾರ ಕೇಂದ್ರಕ್ಕೆ ಬಿಡಲಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಅತ್ಯಾಚಾರ ನಡೆದಿತ್ತು.

ನಂತರ ಆಕೆ ಗರ್ಭಿಣಿಯಾಗಿದ್ದಳು,  ಮಕ್ಕಳ ಕಲ್ಯಾಣ ಸಮಿತಿ ಆಕೆಯನ್ನು ಮೈಸೂರಿನ ರಾಜ್ಯ ಬಾಲಕಿಯರ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿತ್ತು. 18 ವರ್ಷ ತುಂಬಿದ ನಂತರ ಆಕೆ ರಾಮನಗರಕ್ಕೆ ವಾಪಾಸಾಗಿದ್ದಾಳೆ.

ಒಂದು ವಾರದ ಹಿಂದೆ ಖಾಪ್ ಪಂಚಾಯಿತಿ ಆಕೆಗೆ ಊರಿನಲ್ಲಿರಬೇಕಾದರೇ 20 ಸಾವಿರ ರು ನೀಡಬೇಕು ಎಂದು ಹೇಳಿದ್ದಾರೆ.

ನಾನು ಅಸಹಾಯಕಿ, 20 ಸಾವಿರ ರು ನೀಡಲು ಸಾಧ್ಯವಿಲ್ಲ, ಅಷ್ಟೊಂದು ಹಣವನ್ನು ಹೊಂದಿಸಲು ಆಗುವುದಿಲ್ಲ, ಹೀಗಾಗಿ ಜಿಲ್ಲಾಡಳಿತ, ಮಧ್ಯ ಪ್ರವೇಶಿಸಿ ತನಗೆ ಗ್ರಾಮದಲ್ಲಿ ಬದುಕಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾಳೆ.

ಸಂತ್ರಸ್ತ ಯುವತಿಗೆ ಒಬ್ಬ ಸಹೋದರನಿದ್ದು, ಆತ ತನ್ನ ಮನೆಯಲ್ಲಿ ಆಕೆ ವಾಸಿಸಲು ವಿರೋಧಿಸಿದ್ದಾನೆ, ಯಾವಾಗಲಾದರೂ ಆಕೆಯನ್ನು ನೋಡಿದರೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ ಎಂದು ಆಕೆ ತಿಳಿಸಿದ್ದಾಳೆ.  ಇನ್ನೂ ಸಂಬಂಧಿಕರು ಕೂಡ ಆಕೆಯನ್ನು ನಿಂದಿಸುತ್ತಾರೆ. ಒಂದೊಂದು ವೇಳೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆ ಬರುತ್ತದೆ ಎಂದು ಆಕೆ ತಿಳಿಸಿದ್ದಾಳೆ. ಈ ವರ್ಷದ ಜನವರಿಯಲ್ಲಿ ಆಕೆ ರಾಮನಗರದ ಬಾಲಕಿಯರ ವಸತಿ ನಿಲಯದಿಂದ  ಆಕೆಯ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದಾಳೆ. ಸಂತ್ರಸ್ತೆ ಚಿಕ್ಕವಳಿದ್ದಾಗ ಆಕೆಯ ತಾಯಿ ನಿಧನ ಹೊಂದಿದ್ದರು, ಎರಡು ವರ್ಷಗಳ ಹಿಂದೆ ಆಕೆಯ ತಂದೆಯು ಸಾವನ್ನಪ್ಪಿದ್ದಾರೆ.

SCROLL FOR NEXT