ರಾಜ್ಯ

ವಾಯುವಜ್ರ ಬಸ್ ಪ್ರಯಾಣ ದರಕ್ಕಿಂತ ಕ್ಯಾಬ್ ಗಳದ್ದೇ ಅಗ್ಗ!

Srinivas Rao BV
ಬೆಂಗಳೂರು: ವಾಯುವಜ್ರ ಬಸ್ ಪ್ರಯಾಣ ದರಕ್ಕಿಂತ ಕ್ಯಾಬ್ ಗಳ ಪ್ರಯಾಣ ದರವೇ ಅಗ್ಗವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ವಾಯುವಜ್ರದಲ್ಲಿ ಪ್ರಯಾಣ ಮಾಡಬೇಕೆಂದರೆ ಒಬ್ಬರ ಟಿಕೆಟ್ ದರ 300 ರೂಪಾಯಿ. ಆದರೆ ಕ್ಯಾಬ್ ಗಳಲ್ಲಿ ಇದಕ್ಕಿಂತ ಅಗ್ಗದ ದರದಲ್ಲಿ ಪ್ರಯಾಣಿಸಬಹುದಾಗಿದೆ. 
ನವದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೋಷಕರೊಂದಿಗೆ ಬಂದಿಳಿದ ಸಂತೋಷ್ ಕುಮಾರ್ ಎಂಬುವವರು ಎಲೆಕ್ಟ್ರಾನಿಕ್ ಸಿಟಿಗೆ ತೆರಳಬೇಕಿರುತ್ತದೆ. ಆದರೆ ಟಿಕೆಟ್ ದರ ಒಬ್ಬರಿಗೆ 300 ರೂಪಾಯಿಯಾಗಿರುತ್ತದೆ. ಆದರೆ ಕ್ಯಾಬ್ ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ತೆರಳಲು ಖರ್ಚಾಗುವ ಮೊತ್ತ 800 ರೂಪಾಯಿ ತಗುಲುತ್ತದೆ. 
3 ಜನರಿಗೆ 900 ರೂಪಾಯಿ ಖರ್ಚು ಮಾಡಿ ವಾಯುವಜ್ರ ಬಸ್ ನಲ್ಲಿ ತೆರಳಿದರೂ ಸಹ ಲಗೇಜ್ ಗಳನ್ನಿರಿಸಲು ಪ್ರತ್ಯೇಕವಾದ ಸ್ಥಳವಿರುವುದಿಲ್ಲ. ಒಬ್ಬರೇ ಹೋಗದೇ ಜೊತೆಯಲ್ಲಿ ಕೆಲವು ಜನರಿದ್ದರೆ ವಾಯುವಜ್ರಕ್ಕಿಂತ ಕ್ಯಾಬ್ ಗಳಲ್ಲಿ ಸಂಚರಿಸುವುದೇ ಉತ್ತಮ ಎಂದು ಸಂತೋಷ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 
ವಾಯುವಜ್ರ, ವೋಲ್ವೊ ಬಸ್ ಗಳಲ್ಲಿ ಅತಿ ಹೆಚ್ಚು ಪ್ರಯಾಣ ದರ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಕುಸಿಯುತ್ತಿದ್ದು, ಟ್ಯಾಕ್ಸಿ, ಕ್ಯಾಬ್ ಗಳಿಗೆ ಪೈಪೋಟಿ ನೀಡಲು ಬಿಎಂಟಿಸಿ ಸಹ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಬೇಕೆಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ.  
SCROLL FOR NEXT