ರಾಜ್ಯ

ಸಣ್ಣ ನೀರಾವರಿ ಇಲಾಖೆ ಹಗರಣ: ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಒತ್ತಾಯ

Sumana Upadhyaya
ಬೆಂಗಳೂರು: ಶಿವರಾಜ್ ತಂಗಡಗಿಯವರು ಸಚಿವರಾಗಿದ್ದಾಗ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸದ ಗುತ್ತಿಗೆ ನೀಡುವಿಕೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಸಾಬೀತಾಗುವ ಲಕ್ಷಣ ಕಂಡುಬರುತ್ತಿದ್ದು, ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)  ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಅಕ್ರಮ 39 ಕೋಟಿ ರೂಪಾಯಿಗಳ ಹಗರಣದ ವರದಿಯನ್ನು ಪಿಎಸಿ ನಿನ್ನೆ ವಿಧಾನಸಭೆಯಲ್ಲಿ ಮಂಡಿಸಿತು. ವರದಿಯಲ್ಲಿ ಹಗರಣದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಭಾಗಿಯಾಗಿದ್ದು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಮತ್ತು ಹಣ ವಸೂಲು ಮಾಡುವಂತೆ ಶಿಫಾರಸ್ಸು ಮಾಡಿದೆ.
ಬಿಜೆಪಿಯ ಆರ್.ಅಶೋಕ್ ಅವರ ನೇತೃತ್ವದ ಸಮಿತಿ, ರಾಯಚೂರು ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆಲಸದ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಸಾರ್ವಜನಿಕರಿಂದ ಆರೋಪ ಆಕ್ರೋಶ ಮತ್ತು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿಯ ಆರ್.ಅಶೋಕ್ ಅವರ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸ್ವ ದೂರು ದಾಖಲಿಸಿಕೊಂಡಿತ್ತು.
ಸಣ್ಣ ನೀರಾವರಿ ಇಲಾಖೆಯ ಕುಷ್ಟಗಿ ವಿಭಾಗದಲ್ಲಿ 2015-16ರಲ್ಲಿ 39.38 ಕೋಟಿ ರೂಪಾಯಿಗಳ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಪಾರದರ್ಶಕ ಕಾಯ್ದೆಯಡಿ ಟೆಂಡರ್ ಕರೆಯದೇ ಕೇವಲ ಒಬ್ಬ ವ್ಯಕ್ತಿಗೆ ತಲಾ ಒಂದು ಲಕ್ಷ ರೂಪಾಯಿ ಮೊತ್ತದ 3,938 ಕಾಮಗಾರಿಗಳನ್ನು ತುಂಡು ಗುತ್ತಿಗೆಯನ್ನಾಗಿ ಪರಿವರ್ತಿಸಿ 39.38 ಕೋಟಿ ರೂಪಾಯಿಗಳ ಟೆಂಡರ್ ನೀಡಲಾಗಿದೆ. ಕಾಮಗಾರಿ ನಡೆಸದೇ ಬೋಗಸ್ ಬಿಲ್ ಗಳನ್ನು ಸಲ್ಲಿಸಿ ಹಣ ಪಾವತಿಸಲಾಗಿದೆ ಎಂದು ವರದಿ ತಿಳಿಸಿದೆ.
SCROLL FOR NEXT