ರಾಜ್ಯ

ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ: ಸದನ ಸಮಿತಿ ಶಿಫಾರಸ್ಸಿಗೆ ಮಹಿಳಾ ಟೆಕ್ಕಿಗಳ ವಿರೋಧ

Srinivas Rao BV
ಬೆಂಗಳೂರು: ಐಟಿ, ಬಿಟಿ ಕಂಪನಿಗಳಲ್ಲಿ ಮಹಿಳೆಯರಿಗೆ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಬಾರದು ಎಂಬ ಸದನ ಸಮಿತಿ ಶಿಫಾರಸ್ಸಿಗೆ ಮಹಿಳಾ ಟೆಕ್ಕಿಗಳಿಂದಲೇ ವಿರೋಧ ವ್ಯಕ್ತವಾಗಿದೆ. 
ಆಕ್ಸೆಂಚರ್ ನಲ್ಲಿ ಕಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಯೊಬ್ಬರು ಸದನ ಸಮಿತಿ ಶಿಫಾರಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಮಾನತೆಯ ವಿಷಯದ ಚರ್ಚೆ ಬಂದಾಗಲೆಲ್ಲಾ ಐಟಿ ಕ್ಷೇತ್ರದ ಮಹಿಳೆಯರಿಗೆ ಉತ್ತೇಜನ ಏಕೆ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರ ವಿರುದ್ಧದ ದೌರ್ಜನ್ಯ ಹಗಲಲ್ಲೂ ನಡೆಯಬಹುದು. ಹಾಗೆಂದ ಮಾತ್ರಕ್ಕೆ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲೇಬಾರದು ಎಂಬ ನಿಯಮ ರೂಪಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. 
ಎಂಎನ್ ಸಿಯಲ್ಲಿ ಕಾರ್ಯನಿರ್ವಹಿಸುವ ಮತ್ತೊಬ್ಬ ಮಹಿಳೆಯೂ ಸಹ ಇದೇ ಮಾದರಿಯಲ್ಲಿ ಪ್ರಶ್ನಿಸಿದ್ದು, ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ನಮಗೆ ಯಾವ ಸಮಸ್ಯೆಯೂ ಇಲ್ಲ. ನಮ್ಮ ಕಚೇರಿಯಲ್ಲಿ ಅತ್ಯಂತ ಹೆಚ್ಚು ಭದ್ರತೆ, ವಾಹನ ವ್ಯವಸ್ಥೆ ಒದಗಿಸುತ್ತಾರೆ ಎಂದಿದ್ದಾರೆ. 
"ಮಹಿಳೆಯರಿಗೆ ರಾತ್ರಿ ಪಾಳಿಯ ಕೆಲಸವನ್ನು ಮತ್ತಷ್ಟು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಭದ್ರತೆಯನ್ನು ಹೆಚ್ಚಿಸುವ ಬದಲು ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ಕ್ಲಾಯ್ ಸ್ಕೂಲ್ಸ್ ನ ಸಿಇಒ ಪ್ರಿಯಾ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. 
SCROLL FOR NEXT