ರಾಜ್ಯ

ಬೆಂಗಳೂರು: ಮಹಿಳೆಯ ಫೋಟೋ ತಿರುಚಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದ ಟೆಕಿ ಬಂಧನ

Shilpa D
ಬೆಂಗಳೂರು: ಮಹಿಳೆಯ ಫೋಟೋಗಳನ್ನು ತಿರುಚಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ ಬೆಂಗಳೂರಿನ ಸಾಪ್ಟ್ ವೇರ್ ಎಂಜಿನೀಯರ್ ನನ್ನು ವಿಜಯವಾಡ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿ 29 ವರ್ಷದ ವಾಸೀಂ ಬಂಧಿತ ಆರೋಪಿ, ಬೆಂಗಳೂರು ಮೂಲದ ಮಹಿಳೆ ವಿವಾಹದ ನಂತರ ವಿಜಯವಾಡದಲ್ಲಿ ನೆಲೆಸಿದ್ದರು, ತನ್ನ ಫೋಟೋಗಳನ್ನು ಎಲ್ಲೆಡೆ ಕಳುಹಿಸುತ್ತಿದ್ದಾನೆ ಎಂದು ಮಹಿಳೆ ವಾಸೀಂ ವಿರುದ್ಧ ವಿಜಯವಾಡದಲ್ಲಿ ದೂರು ದಾಖಲಿಸಿದ್ದರು.
ಮಹಿಳೆಯ ಹೆಸರಲ್ಲಿ ನಕಲಿ ಅಕೌಂಟ್ ಸೃಷ್ಟಿಸಿದ್ದ ವಾಸೀಂ, ದೂರು ನೀಡಿದ್ದ ಮಹಿಳೆಯ ಹೆಸರಲ್ಲಿದ್ದ ಸಿಮ್ ಕಾರ್ಡ್ ಬಳಸುತ್ತಿದ್ದ. ಅದರಿಂದ ಎಲ್ಲರಿಗೂ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ, ಮಹಿಳೆಯ ಆಧಾರ್ ಕಾರ್ಡ್ ಕದ್ದು, ಆಕೆಯ ಸಹಿಯನ್ನು ಪೋರ್ಜರಿ ಮಾಡಿ ಸಿಮ್ ಖರೀದಿಸಿದ್ದ, ತನ್ನ ಆಧಾರ್ ಕಾರ್ಡ್ ಕಳೆದು ಹೋಗಿದೆ ಎಂದು ಮಹಿಳೆ ತಿಳಿದಿದ್ದರು ಎಂದು ವಿಜಯವಾಡ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ವಾಸೀಂ ಮಹಿಳೆಗೆ ತೊಂದರೆ ನೀಡುತ್ತಿದ್ದ, ಏಪ್ರಿಲ್ 4 ರಂದು ಮಹಿಳೆ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಗೆ ವಾಸಿಂ ಕಾಲೇಜು ದಿನಗಳಿಂದ ಗೊತ್ತಿತ್ತು. 2016 ರಲ್ಲಿ ಆಕೆ ವಿವಾಹವಾಗಿ ವಿಜಯವಾಡಕ್ಕೆ ತೆರಳಿದ್ದರು. ಇದರಿಂದ ಬೇಸರ ಗೊಂಡ ಆತ, ನಕಲಿ ಅಕೌಂಟ್ ಮೂಲಕ ಆಕೆಯ ಹೆಸರಲ್ಲಿ ಸ್ನೇಹಿತರಿಗೆ ಹಾಗೂ ಆಕೆಯ ಗಂಡನಿಗೆ ಆಕ್ಷೇಪಾರ್ಹ ಚಿತ್ರಗಳು ಹಾಗೂ ಸಂದೇಶ ಕಳುಹಿಸುತ್ತಿದ್ದ. 
ಆತ ತಪ್ಪಿಸಿಕೊಳ್ಳುವುದನ್ನು ತಡೆಯುವ ಸಲುವಾಗಿ ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರಿಗೆ ಆಗಮಿಸಿದ ವಿಜಯವಾಡ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಹೇಳಿದ್ದಾರೆ. 
SCROLL FOR NEXT