ಬೆಳಗಾವಿ: ಬೆಳಗಾವಿ ಮೀಡಿಯಾ ಫೋರ್ಸ್ ಎಂಬ ವಾಟ್ಸ್ ಅಪ್ ಗ್ರೂಪ್'ಗೆ ಅಶ್ಲೀಲ ಚಿತ್ರಗಳನ್ನು ರವಾನೆ ಮಾಡಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಮಹಂತೇಶ ಮಲ್ಲಿಕಾರ್ಜುನ ಅವರು ಅಶ್ಲೀಲ ಚಿತ್ರಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಮಹಂತೇಶ ಮಲ್ಲಿಕಾರ್ಜುನ ಕವಟಗಿ ಮಠ ಅವರು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಪತ್ರಕರ್ತರಿರುವ ಬೆಳಗಾವಿಯ ಮೀಡಿಯಾ ಫೋರ್ಸ್ ಎಂಬ ವಾಟ್ಸಪ್ ಗ್ರೂಪ್ ಗೆ 56 ಅಶ್ಲೀಲ ಚಿತ್ರಗಳನ್ನು ರವಾನಿಸಿದ್ದರು. ಇದರಿಂದ ಹಲವರಿಗೆ ಮುಜುಗರವಾಗಿದ್ದು, ಗ್ರೂಪ್ ನಿಂದ ಹೊರ ಹೋಗಿದ್ದಾರೆ. ಅಲ್ಲದೆ ಕವಟಗಿ ಮಠ ಅವರನ್ನೂ ಗ್ರೂಪ್ ನಿಂದ ತೆಗೆದು ಹಾಕಿದ್ದರು.
ಇದೀಗ ಅಶ್ಲೀಲ ಚಿತ್ರಗಳ ಕುರಿತು ಸ್ಪಷ್ಟನೆ ನೀಡಿರುವ ಕವಟಗಿ ಮಠ ಅವರು, ಫೋಟೋಗಳು ಆಕಸ್ಮಿಕವಾಗಿ ರವಾನೆಯಾಗಿದೆ. ಉದ್ದೇಶಪೂರ್ವಕವಾಗಿ ನಾನು ಯಾವುದೇ ಫೋಟೋಗಳನ್ನು ರವಾನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಈ ಪೋಸ್ಟ್ ಗಳು ಅವರ ಅಭಿರುಚಿ ತೋರಿಸುತ್ತದೆ. ಅಥವಾ ಅವರಲ್ಲಿರುವ ಕೆಟ್ಟ ಆಲೋಚನೆಗಳನ್ನು ತೋರಿಸುತ್ತದೆ? ಎಂಎಲ್'ಸಿ ಯಾದವರು ಸಾರ್ವಜನಿಕರ ಜೀವನದೊಂದಿಗೆ ಬದುಕುತ್ತಿದ್ದಾರೆ. ಇಂತಹ ತಪ್ಪುಗಳನ್ನು ಅವರು ಮಾಡಬಾರದು. ಮಹಿಳಾ ಸಹೋದ್ಯೋಗಿಗಳು ಹಾಗೂ ನಾವು ಎಂಎಲ್ ಸಿ ಅವರೊಂದಿಗೆ ಕೆಲಸ ಮಾಡುತ್ತಿರುತ್ತೇವೆ. ಈ ರೀತಿಯ ಬೆಳವಣೆಗೆಗಳು ಮುಂದಿನ ದಿನಗಳಲ್ಲಿ ಅವರಿಗೆ ಗೌರವವನ್ನು ಹೇಗೆ ನೀಡುತ್ತದೆ ಎಂದು ಪ್ರಶ್ನಿಸಿದ್ದಾರೆ.