ಬನ್ನೇರುಘಟ್ಟ(ಬೆಂಗಳೂರು): ಕಾಡಾನೆಗಳ ದಾಳಿಗೆ ಸಿಲುಕಿ ಇಬ್ಬರು ಸಿಆರ್‌ಪಿಎಫ್ ಯೋಧರು ದಾರುಣ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಕಗ್ಗಲೀಪುರದಲ್ಲಿ ನಡೆದಿದೆ.
ಕಾಡಾನೆ ದಾಳಿಗೆ ಬಲಿಯಾದವರನ್ನು ಹಾವೇರಿ ಮೂಲದ 35 ವರ್ಷದ ಪುಟ್ಟಪ್ಪ ಮತ್ತು ತಮಿಳುನಾಡು ಮೂಲದ 56 ವರ್ಷದ ಮೂರ್ತಿ ಎಂದು ತಿಳಿದುಬಂದಿದೆ.
ಆನೆ ದಾಳಿಯಿಂದಾಗಿ ಮೂರ್ತಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟಪ್ಪ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದಾರೆ.