ಮಂಗಳೂರು: ಮೇ 24 ರಂದು ಕೊಕ್ಕಡ ಬಸ್ ನಿಲ್ದಾಣದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ರಾಜ್ಯದ ಎಲ್ಲಾ ಶಾಸಕರುಗಳಿಗೆ ಕೊಕ್ಕಡ ಎಂಡೋ ವಿರೋಧಿ ಸಮಿತಿ ಸದಸ್ಯ ಕೆ. ಶ್ರೀಧರ್ ಗೌಡ ಪತ್ರ ಬರೆದಿದ್ದಾರೆ.
ಪ್ರತಿಯೊಬ್ಬ ಎಂಡೋ ಸಲ್ಫಾನ್ ಸಂತ್ರಸ್ತನಿಗೆ ತಲಾ ಐದು ಲಕ್ಷ ರು ಪರಿಹಾರ ನೀಡುವುದು, ಹಾಗೂ 8 ಡೇ ಕೇರ್ ಸೆಂಟರ್ ಗಳನ್ನು ಸ್ಥಾಪಿಸುವುದಾಗಿ ಸಿಎಂ ಭರವಸೆ ನೀಡುವವರೆಗೂ ಉಪವಾಸ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಸಂತ್ರಸ್ತರ ನೋವು ಎಲ್ಲ ನೋವಾಗಿದ್ದು, ಇದಕ್ಕೆ ವ್ಯಾಪಕ ಬೆಂಬಲ ನೀಡಬೇಕು ಎಂದು ಅವರು ಕೋರಿದ್ದಾರೆ.
ಈ ವರ್ಷದ ಜನವರಿ ತಿಂಗಳಲ್ಲಿ ಸಂತ್ರಸ್ತ ಬಾಬುಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿರಾರು ಎಂಡೋಸಲ್ಫಾನ್ ಸಂತ್ರಸ್ತರ ಮತ್ತು ಅವರ ಆರೈಕೆದಾರರು ಅದೇ ದಾರಿ ಹಿಡಿಯಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.