ರಾಜ್ಯ

ಸರ್ಕಾರದ ಚಾಣಾಕ್ಷ ನಡೆ: ಜಗಿಯುವ ತಂಬಾಕಿಗಿಲ್ಲ ನಿಷೇಧ!

Srinivas Rao BV
ಬೆಂಗಳೂರು: ಎಲ್ಲಾ ರೀತಿಯ ತಂಬಾಕುಗಳ ಮಾರಾಟವನ್ನು ನಿಷೇಧಗೊಳಿಸಿ ಆದೇಶ ಹೊರಡಿಸಿದ 5 ತಿಂಗಳ ನಂತರ ರಾಜ್ಯ ಸರ್ಕಾರ ಉಲ್ಟಾ ಹೊಡೆದಿದ್ದು, ಆದೇಶವನ್ನು ತನ್ನ ಚಾಣಾಕ್ಷ ನಡೆಯಿಂದ ಮಾರ್ಪಾಡು ಮಾಡಿದೆ. ಈ ಹಿನ್ನೆಲೆಯಲ್ಲಿ ಜಗಿಯುವ ತಂಬಾಕಿಗೆ ನಿಷೇಧ ಇಲ್ಲದಂತಾಗಿದೆ. 
ಅಡ್ವೊಕೇಟ್ ಜನರಲ್ ನ ಸಲಹೆಯಂತೆ ಆದೇಶವನ್ನು ಮಾರ್ಪಾಡು ಮಾಡುತ್ತಿರುವುದಾಗಿ ಹೈಕೋರ್ಟ್ ಗೆ ತಿಳಿಸಿರುವ ರಾಜ್ಯ ಸರ್ಕಾರ ಅಡ್ವೊಕೇಟ್ ಜನರಲ್ ನ ಅಭಿಪ್ರಾಯವನ್ನು ಉಲ್ಲೇಖಿಸಿದೆ. ತಂಬಾಕಿನ ಸಂಪೂರ್ಣ ನಿಷೇಧದಿಂದ ಈ ವರೆಗೂ ಮುಚ್ಚಲಾಗಿರುವ ಜಗಿಯುವ ತಂಬಾಕು ಉತ್ಪಾದನಾ ಕೇಂದ್ರಗಳ ಬಗ್ಗೆ ಈ ವರೆಗೂ ವಶಪಡಿಸಿಕೊಳ್ಳಲಾದ ತಂಬಾಕು ಉತ್ಪನ್ನಗಳು ಹಾಗೂ ನೊಟೀಸ್ ಜಾರಿಗೊಳಿಸಿರುವುದು, ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿರುವುದರ ಬಗ್ಗೆ ಪ್ರತಿ ದಿನ ವರದಿ ನೀಡಬೇಕೆಂದು ಆಹಾರ ಸುರಕ್ಷತೆ ಇಲಾಖೆಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನೂ ಕೇಳಿತ್ತು. 
ಆಹಾರ ಸುರಕ್ಷತೆ ಇಲಾಖೆ ತಂಬಾಕು ಉತ್ಪಾದನಾ ಘಟಕಗಳನ್ನು ಮುಚ್ಚಿಸುವಂತಿಲ್ಲ. ಅಥವಾ ಸುತೋಲೆಯಲ್ಲಿ ತಿಳಿಸಿರುವಂತೆ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳುವಂತೆಯೂ ಇಲ್ಲ ಎಂದು ಅಡ್ವೊಕೇಟ್ ಜನರಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಜಗಿಯುವ ತಂಬಾಕು ಎಂಬ ಪದವನ್ನು ಗುಟ್ಕಾ ಹಾಗೂ ಪಾನ್ ಮಸಾಲ ಪದಗಳಿಂದ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದರು. ಅಷ್ಟೇ ಅಲ್ಲದೇ, ಆಹಾರ ಸುರಕ್ಷತೆ ಇಲಾಖೆ ಬೇರೆ ಸೆಕ್ಷನ್ ಗಳ ಅಡಿಯಲ್ಲಿ ತಂಬಾಕು ಉತ್ಪಾದನಾ ಕೇಂದ್ರಗಳನ್ನು ಮುಚ್ಚಿಸುವುದು ಹಾಗೂ ಉತ್ಪನ್ನಗಳನ್ನು ವಶಪಡಿಸಿಕೊಳ್ಳಬಹುದು ಆದರೆ ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಸೆಕ್ಷನ್ ಗಳ ಅಡಿಯಲ್ಲಿ ಮಾಡಲು ಸಾಧ್ಯವಿಲ್ಲ ಎಂದಿದ್ದರು.
ಈ ಮೂಲಕ ಜಗಿಯುವ ತಂಬಾಕಿಗೆ ವಿಧಿಸಲಾಗಿದ್ದ ನಿಷೇಧ ಸಡಿಲವಾದಂತಾಗಿದೆ. ಸರ್ಕಾರ ಜಗಿಯುವ ತಂಬಾಕಿನ ಲಾಬಿಗೆ ಮಣಿದಂತಿದೆ, ಸರ್ಕಾರದ ಈ ನಡೆಯನ್ನು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ಕ್ಯಾನ್ಸರ್ ರೋಗಿಗಳ ಸಹಾಯ ಸಂಘಟನೆಯಲ್ಲಿ ಸಕ್ರಿಯರಾಗಿರುವ ಅಡ್ವೊಕೇಟ್ ಕೆವಿ ಧನಂಜಯ್ ಹೇಳಿದ್ದಾರೆ. 
SCROLL FOR NEXT