ರಾಜ್ಯ

ರಾಯಚೂರು; ನೀರು ಕುಡಿಯಲು ಹೋಗಿ ಪ್ರಾಣ ಕಳೆದುಕೊಂಡ 16 ಕೋತಿಗಳು

Shilpa D
ರಾಯಚೂರು: ಬಿಸಿಲ ಬೇಗೆಗೆ ಬಾಯಾರಿ ನೀರು ಕುಡಿಯಲು ಹೋದ 16 ಕೋತಿಗಳು ನೀರಿನ ಟ್ಯಾಂಕ್ ನೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಗಧಾರ್ ಗ್ರಾಮದಲ್ಲಿ ನಡೆದಿದೆ.
ಬಾಯಾರಿದ್ದ ಕೋತಿಗಳು ನೀರಿನ ಟ್ಯಾಂಕ್ ಕಂಡ ಕೂಡಲೇ ಒಳಗೆ ಇಳಿದಿವೆ, ಆದರೆ ನೀರು ಕುಡಿದ ನಂತರ ಕೋತಿಗಳಿಗೆ ಮೇಲೆ ಏರಲು ಸಾಧ್ಯವಾಗಿಲ್ಲ. ನಂತರ ಹಸಿವು ಮತ್ತು ಬಾಯಾರಿಕೆಯಿಂದ ಕೋತಿಗಳು ಅಲ್ಲಿಯೇ ಸಾವನ್ನಪ್ಪಿವೆ. ಟ್ಯಾಂಕ್ ನಿಂದ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಗ್ರಾಮಸ್ಥರು ಪರಿಶೀಲಿಸಿದಾಗ ಕೋತಿಗಳು ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಬೇಸಿಗೆ ಕಾಲದಲ್ಲಿ ಕೋತಿಗಳು ಆಹಾರ ಮತ್ತು ನೀರು ಅರಸಿ ಬರುವುದು ಸಾಮಾನ್ಯ, ಅರಣ್ಯದಲ್ಲಿ ನೀರಿನ ಸೆಲೆಗಳು ಬತ್ತಿ ಹೋದ ಕಾರಣ ನೀರನ್ನು ಹುಡುಕಿಕೊಂಡು ಅವರು ಊರಿಗೆ ಬಂದಿವೆ.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮುಖಂಡರು ದುರಂತದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಶೀಘ್ರವೇ ಟ್ಯಾಂಕ್ ಕೆಲಸವನ್ನು ಪೂರ್ಣಗೊಳಿಸಿದ್ದರೇ ಕೋತಿಗಳು ಸಾಯುತ್ತಿರಲಿಲ್ಲ , ಟ್ಯಾಂಕ್ ಗೆ ಇನ್ನೂ ಎಕೆ ಮೆಟ್ಟಿಲುಗಳನ್ನು ಕಟ್ಟಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೇ ಗ್ರಾಮಸ್ಥರು ಕೋತಿಗಳ ಶವ ಸಂಸ್ಕಾರ ಮಾಡಿದ್ದಾರೆ.
SCROLL FOR NEXT