ಕಲಬುರಗಿ: ಮೃತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ 2ಸಾವಿರ ಕೋಟಿ ರು. ಮೌಲ್ಯದ ಹಗರಣವನ್ನು ಬಯಲಿಗೆಳೆಯಲು ತಯಾರಿ ನಡೆಸುತ್ತಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ, ತಿವಾರಿ ಯಾವುದೇ ಹಗರಣವನ್ನು ಪತ್ತೆ ಹಚ್ಚಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅನುರಾಗಿ ತಿವಾರಿ ಬಹು ದೊಡ್ಡ ಹಗರಣವನ್ನು ಪತ್ತೆ ಹಚ್ಚಿದ್ದು, ಅದಕ್ಕಾಗಿ ಅವರಿಗೆ ಬೆದರಿಕೆ ಬರುತ್ತಿದ್ದವು ಎಂಬ ಕುಟುಂಬಸ್ಥರು ಆರೋಪಿಸಿದ್ದರು. ಜೊತೆಗೆ ಅನುರಾಗ್ ತಿವಾರಿ ಅವರದ್ದು ಕೊಲೆ ಎಂದು ಅವರ ಸಹೋದರ ದೂರು ದಾಖಲಿಸಿದ ನಂತರ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ, ಆದರೆ ತಿವಾರಿ ಯಾವುದೇ ಹಗರಣ ಕಂಡು ಹಿಡಿದಿರಲಿಲ್ಲ ಎಂದು ಗುಪ್ತ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಬದ್ದವಾಗಿರುವ ಯಾವುದೇ ಅಧಿಕಾರಿ ಈ ರೀತಿ ಕೆಲಸ ಮಾಡಲು ಸಾಧ್ಯವಿಲ್ಲ, ಕರ್ತವ್ಯ ಬದ್ದ ಅಧಿಕಾರಿಯಾಗಿದ್ದ ತಿವಾರಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಯಾವುದೇ ಹಗರಣವನ್ನು ಪತ್ತೆ ಹಚ್ಚಿರಲಿಲ್ಲ. ಮೊದಲಿಗೆ ಯಾವುದೇ ಹಗರಣಗಳು ಕೂಡ ಇಲಾಖೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಅನ್ನಭಾಗ್ಯ ಅಕ್ಕಿ ಖರೀದಿಯಲ್ಲಿ ಭಾರೀ ಮಟ್ಟದ ಗೋಲ್ ಮಾಲ್ ನಡೆದಿದ್ದು ಅದನ್ನು ಅನುರಾಗ್ ತಿವಾರಿ ಪತ್ತೆ ಹಚ್ಚಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.