ಸಂಗ್ರಹ ಚಿತ್ರ 
ರಾಜ್ಯ

ಮೈಸೂರಿನ ಶಕ್ತಿಧಾಮದಲ್ಲಿ ನೀರವ ಮೌನ: ಬೆನ್ನೆಲುಬಾಗಿದ್ದ ಅಮ್ಮನಿಗೆ ಮಕ್ಕಳಿಂದ ಶ್ರದ್ಧಾಂಜಲಿ

ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನರಾದ ವಿಚಾರ ತಿಳಿಯುತ್ತಿದ್ದಂತೆಯೇ ಮೈಸೂರಿನ ಶಕ್ತಿಧಾಮದಲ್ಲಿ ನೀರವ ಮೌನ ಆವರಿಸಿದೆ.

ಮೈಸೂರು: ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನರಾದ ವಿಚಾರ ತಿಳಿಯುತ್ತಿದ್ದಂತೆಯೇ ಮೈಸೂರಿನ ಶಕ್ತಿಧಾಮದಲ್ಲಿ ನೀರವ ಮೌನ ಆವರಿಸಿದೆ.

ನಿರ್ಗತಿಕ ಮಹಿಳೆ ಮತ್ತು ಮಕ್ಕಳಿಗೆ ಆಶ್ರಯ ನೀಡುವ ಉದ್ದೇಶದಿಂದ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರು ಈ ಶಕ್ತಿಧಾಮವನ್ನು ಸ್ಥಾಪಿಸಿದ್ದರು. ಆದರೆ ಇದೀಗ ಪಾರ್ವತಮ್ಮ ರಾಜ್ ಕುಮಾರ್ ಅವರ  ನಿಧನದಿಂದಾಗಿ ಶಕ್ತಿಧಾಮದಲ್ಲಿ ನೀರವ ಮೌನ ಆವರಿಸಿದ್ದು, ಆಶ್ರಮದಲ್ಲಿನ ಮಹಿಳೆಯರು ಮತ್ತು ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮೈಸೂರಿನ ನಂಜನಗೂಡು-ಊಟಿ ರಸ್ತೆಯಲ್ಲಿರುವ ಶಕ್ತಿಧಾಮ ಆಶ್ರಮವನ್ನು ಮಹಿಳಾ ಸಬಲೀಕರಣದ ಉದ್ದೇಶದಿಂದ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಾಣ ಮಾಡಿದ್ದರು. ಸುಮಾರು 4 ಎಕರೆ  ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ಆಶ್ರಮದಲ್ಲಿ ಈ ವರೆಗೂ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಆಶ್ರಯ ಪಡೆದಿದ್ದರು. ಇಂದಿಗೂ ಶಕ್ತಿಧಾಮದಲ್ಲಿ ಸುಮಾರು 100 ಮಹಿಳೆಯರು ಹಾಗು ಸುಮಾರು ಮಕ್ಕಳು ಆಶ್ರಯ  ಪಡೆದಿದ್ದು, ಸಮಾಜದಿಂದ ದೂರಾಗಿದ್ದ ಮಹಿಳೆಯರಿಗೆ ಇಲ್ಲಿ ಆಶ್ರಯ ನೀಡಲಾಗಿದೆ.



ದೇವದಾಸಿಯರು, ಸಫಾಯಿ ಕರ್ಮಚಾರಿಗಳು, ಸೋಲಿಗರು, ವಲಸಿಗರು ಹೀಗೆ ವಿವಿಧ ಸಮುದಾಯಗಳ ನಿರ್ಗತಿಕ ಮಹಿಳೆಯರಿಗೆ ಇಲ್ಲಿ ಆಶ್ರಯ ನೀಡಲಾಗಿತ್ತು. ಸಂಸ್ಥೆಯಲ್ಲಿ ಮಹಿಳೆಯರಿಗೆ ವೃತ್ತಿ ತರಬೇತಿ ಮತ್ತು ಶಿಕ್ಷಣ  ನೀಡಲಾಗುತ್ತಿದೆ. ಶಕ್ತಿಧಾಮವನ್ನು ಖ್ಯಾತ ಸಾಹಿತಿ ಕವಿ ಜಿಎಸ್ ಶಿವರುದ್ರಪ್ಪ ಅವರ ಪುತ್ರ ಜಿಎಸ್ ಜೈದೇವ್ ಅವರು ಮುನ್ನಡೆಸುತ್ತಿದ್ದಾರೆ.

ಡಾ.ರಾಜ್ ಕುಮಾರ್ ಅವರು ಈ ಹಿಂದೆ ನಡೆಸಿದ್ದ ಸಂಗೀತ ರಸಸಂಜೆಗಳಿಂದ ಬಂದ ಹಣದಲ್ಲಿ ಈ ಶಕ್ತಿಧಾಮವನ್ನು ಮುನ್ನಡೆಸಲಾಗುತ್ತಿದೆ. ಈ ಹಿಂದೆ 2007ರಲ್ಲಿ 2008ರಲ್ಲಿ ಮೈಸೂರಿನಲ್ಲಿ ತಾರಾ ಸಂಜೆ ಆಯೋಜಿಸಿದ್ದ  ಪಾರ್ವತಮ್ಮ ರಾಜ್ ಕುಮಾರ್ ಅವರು, ತಮ್ಮ ಪುತ್ರರೂ ಸೇರಿದಂತೆ ಚಿತ್ರರಂಗದ ಪ್ರಮುಖ ನಟರನ್ನು ಕರೆಸಿ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಿಂದಾಗಿ ಸಾಕಷ್ಟು ಹಣ ಹರಿದುಬಂದಿತ್ತು. ಈ ಹಣವನ್ನೂ  ಶಕ್ತಿಧಾಮದ ನಿರ್ವಹಣೆಗೆ ಬಳಸಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.

ರಾಜ್ ಅಪಹರಣ ವೇಳೆ ತಮಿಳುನಾಡಿನ ಗಡಿಯಲ್ಲಿನ ಬುಡುಕಟ್ಟು ಮಹಿಳೆಯರಿಗೆ ರಕ್ಷಣೆ ನೀಡಿದ್ದ ಪಾರ್ವತಮ್ಮ
ಇನ್ನು ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಸಂದರ್ಭದಲ್ಲಿ ಗಡಿ ಭಾಗ ಉದ್ವಿಗ್ನವಾಗಿತ್ತು. ಈ ಸಂದರ್ಭದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ಗಡಿ ಭಾಗದ ಬುಡುಕಟ್ಟು ಮಹಿಳೆಯರನ್ನು ಇದೇ  ಶಕ್ತಿಧಾಮಕ್ಕೆ ಕರೆತಂದು ಆಶ್ರಯ ನೀಡಿದ್ದರು. ಇಂದಿಗೂ ಶಕ್ತಿಧಾಮದಲ್ಲಿನ ಮಹಿಳೆಯರು ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT